ADVERTISEMENT

ಬಳ್ಳಾರಿ: ಸರ್ಕಾರಿ ಕಾಲೇಜಿನಲ್ಲಿ‌ ಬಿಎಸ್ಸಿ, ಎಂ.ಕಾಂ ಆರಂಭ

​ಪ್ರಜಾವಾಣಿ ವಾರ್ತೆ
Published 15 ಮೇ 2019, 5:56 IST
Last Updated 15 ಮೇ 2019, 5:56 IST
ಬಳ್ಳಾರಿಯ‌ ಗಾಲಿ ರುಕ್ಮಿಣಮ್ಮ ಚೆಂಗಾರೆಡ್ಡಿ ಸ್ಮಾರಕ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣೆ ಕಾಲೇಜು
ಬಳ್ಳಾರಿಯ‌ ಗಾಲಿ ರುಕ್ಮಿಣಮ್ಮ ಚೆಂಗಾರೆಡ್ಡಿ ಸ್ಮಾರಕ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣೆ ಕಾಲೇಜು   

ಬಳ್ಳಾರಿ:ನಗರದ ಗಾಲಿ ರುಕ್ಮಿಣಮ್ಮ ಚೆಂಗಾರೆಡ್ಡಿ ಸ್ಮಾರಕ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಪ್ರಸಕ್ತ ವರ್ಷದಿಂದ ಬಿಎಸ್ಸಿ ಮತ್ತು ಎಂ.ಕಾಂ ಕೋರ್ಸ್ ಗಳನ್ನು ಆರಂಭಿಸಲಾಗುವುದು ಎಂದು ಪ್ರಾಂಶುಪಾಲ ಪ್ರೊ.ಪಿ.ರಾಧಾಕೃಷ್ಣ ತಿಳಿಸಿದರು.

ಕಾಲೇಜಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಸಿಎಂ, ಪಿಎಂಸಿಎಸ್, ಸಿಬಿಝಡ್, ಇಎಂಎಸ್ ಟಿ ಸಂಯೋಜನೆಗಳಿವೆ ಎಂದು ಮಾಹಿತಿ ನೀಡಿದರು.

ಹೈ-ಕ ಅನುದಾನದಲ್ಲಿ 13 ತರಗತಿ‌ ಕೊಠಡಿ, ರಾಜ್ಯ‌ಸರ್ಕಾರದ ಅನುದಾನದಲ್ಲಿ ಕಾಂಪೌಂಡ್, ಕ್ಯಾಂಟೀನ್ ಹಾಗೂ ಮಲ್ಟಿ ಜಿಮ್ ನಿರ್ಮಿಸಲಾಗುವುದು ಎಂದರು.

ADVERTISEMENT

ಕಾಲೇಜಿನಲ್ಲಿ ವಿಜ್ಞಾನ ಕೋರ್ಸ್ ಆರಂಭಿಸುತ್ತಿರುವುದರಿಂದ ಕಾಲೇಜು ಹೆಸರನ್ನು ಸರ್ಕಾರಿ ಪ್ರಥಮ‌ದರ್ಜೆ ಕಾಲೇಜು, ಬಳ್ಳಾರಿ ನಗರ ಎಂದು ‌ಬದಲಾಯಿಸಲು ಕೋರಿ‌ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.