ADVERTISEMENT

ಎಸಿ ಸ್ಫೋಟ ಪ್ರಕರಣ: ವದಂತಿ ಹರಡುವವರ ವಿರುದ್ಧ ಕ್ರಮ- ಪೊಲೀಸರು

​ಪ್ರಜಾವಾಣಿ ವಾರ್ತೆ
Published 3 ಮೇ 2024, 19:03 IST
Last Updated 3 ಮೇ 2024, 19:03 IST
ಎ.ಸಿ ಸ್ಫೋಟ ಸಂಭವಿಸಿದ್ದ ಕಲ್ಯಾಣ್‌ ಜ್ಯುವೆಲರ್ಸ್‌ಗೆ ಭೇಟಿ ನೀಡಿದ್ದ ಬಳ್ಳಾರಿ ನಗರ ಶಾಸಕ ನಾರಾ ಭರತ್‌ ರೆಡ್ಡಿ ಪರಿಶೀಲನೆ ನಡೆಸಿದರು. 
ಎ.ಸಿ ಸ್ಫೋಟ ಸಂಭವಿಸಿದ್ದ ಕಲ್ಯಾಣ್‌ ಜ್ಯುವೆಲರ್ಸ್‌ಗೆ ಭೇಟಿ ನೀಡಿದ್ದ ಬಳ್ಳಾರಿ ನಗರ ಶಾಸಕ ನಾರಾ ಭರತ್‌ ರೆಡ್ಡಿ ಪರಿಶೀಲನೆ ನಡೆಸಿದರು.    

ಬಳ್ಳಾರಿ: ‘ಬಳ್ಳಾರಿಯ ಕಲ್ಯಾಣ್‌ ಜ್ಯುವೆಲರ್ಸ್‌ ಮಳಿಗೆಯಲ್ಲಿ ಗುರುವಾರ ಸಂಭವಿಸಿದ ಹವಾನಿಯಂತ್ರಕ (ಎಸಿ) ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಪ್ರಚೋದನಾಕಾರಿ ಪೋಸ್ಟ್‌ಗಳು ಹಾಕುತ್ತಿದ್ದು, ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

‘ಕಲ್ಯಾಣ್‌ ಜ್ಯುವೆಲರ್ಸ್‌ ಮಳಿಗೆಯ ಎಸಿ ದುರಸ್ತಿಗಾಗಿ ಅಹಮದ್ ಭಾಷಾ, ಸೈಯ್ಯದ್ ತಬ್ರೇಜ್ ಭಾಷಾ, ಸೈಯ್ಯದ್ ಜುಬೇರ್ ಎಂಬುವರನ್ನು ಕರೆಸಲಾಗಿತ್ತು. ಎಸಿಗೆ ಗ್ಯಾಸ್‌ ತುಂಬುವಾಗ ಸ್ಫೋಟ ಸಂಭವಿಸಿ, ಮೂವರ ಜೊತೆ ಮಳಿಗೆ ಸಿಬ್ಬಂದಿ ಅರುಣ್ ಮತ್ತು ನಿಂಗಪ್ಪ ಎಂಬುವರು ಗಾಯಗೊಂಡರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಸ್ಟೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಾಕಿ, ಇದು ಭಯೋತ್ಪಾದಕ ಕೃತ್ಯವೆಂದು ಬಿಂಬಿಸುತ್ತಿದ್ದಾರೆ. ಸುಳ್ಳು ಸುದ್ದಿ ಹರಡತೊಡಗಿದ್ದಾರೆ. ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ ಕುಮಾರ್‌ ಬಂಡಾರು ತಿಳಿಸಿದ್ದಾರೆ.

ADVERTISEMENT
ರಂಜಿತ್‌ ಕುಮಾರ್‌ ಬಂಡಾರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.