ಬಳ್ಳಾರಿ: ‘ವಶಪಡಿಸಿಕೊಂಡ ಜಮೀನಿಗೆ ನ್ಯಾಯಯುತ ಪರಿಹಾರ ನೀಡಿ ಮತ್ತು ಕಾರ್ಖಾನೆ ಸ್ಥಾಪಿಸಿ ಉದ್ಯೋಗ ಸೃಷ್ಟಿಸಿ ಎಂಬ ಬೇಡಿಕೆಯೊಂದಿಗೆ 950 ದಿನದಿಂದ ಪ್ರತಿಭಟಿಸುತ್ತಿರುವ ಕುಡುತಿನಿ ಭೂಸಂತ್ರಸ್ತರು, 3 ಹಂತಗಳಲ್ಲಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದಾರೆ.
‘ಮೊದಲ ಹಂತದಲ್ಲಿ ಸಂಡೂರು ಕ್ಷೇತ್ರದ ಶಾಸಕ, ಸಂಸದರ ಮನೆ ಎದುರು ಪ್ರತಿಭಟನೆ; ಎರಡನೇ ಹಂತದಲ್ಲಿ ಸಂಘ ಸಂಸ್ಥೆಗಳು, ಹೋರಾಟಗಾರರು ಮತ್ತು ನಾಯಕರ ನೇತೃತ್ವದಲ್ಲಿ ಬಳ್ಳಾರಿ ಬಂದ್, ಮೂರನೇ ಹಂತದಲ್ಲಿ ಬೆಂಗಳೂರಿಗೆ ಪಾದಯಾತ್ರೆ ತೆರಳಿ, ಅನಿರ್ದಿಷ್ಟಾವಧಿ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಯು.ಬಸವರಾಜು, ‘ಯಡಿಯೂರಪ್ಪ ಅವರ ಸರ್ಕಾರ 12 ಸಾವಿರ ಎಕರೆ ಭೂಮಿಯನ್ನು ವಶಕ್ಕೆ ಪಡೆಯಿತು. ಯುವಜನರಿಗೆ 14 ವರ್ಷಗಳ ಉದ್ಯೋಗ ನಷ್ಟ ಆಗಿದೆ. ಸಿದ್ದರಾಮಯ್ಯ ಸರ್ಕಾರ ಇದನ್ನು ಗಮನಿಸುತ್ತಿಲ್ಲ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.