
ಬಳ್ಳಾರಿಯ ಹಜರತ್ ಮಕದುಮ್ ಜಾನಿಬಾಬಾ ದರ್ಗಾದಲ್ಲಿ ಉರುಸ್ ಅಂಗವಾಗಿ ಮುಸ್ಲಿಮರೊಂದಿಗೆ ಹಿಂದೂ ಮಹಿಳೆಯರೂ ಪ್ರಾರ್ಥನೆ ಸಲ್ಲಿಸಿದರು
ಬಳ್ಳಾರಿ: ಬಳ್ಳಾರಿ ನಗರದ ಹಜರತ್ ಮಕದುಮ್ ಜಾನಿಬಾಬಾ ದರ್ಗಾದಲ್ಲಿ ಮಂಗಳವಾರ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಒಟ್ಟಾಗಿ ಉರುಸ್ ಆಚರಣೆ ಆಚರಿಸಿದರು. ಈ ಮೂಲಕ ದರ್ಗಾ ಭಾವ್ಯಕ್ಯತೆಗೆ ಸಾಕ್ಷಿಯಾಯಿತು.
ಮೂರು ದಿನಗಳ ಕಾಲ ನಡೆಯುವ ಉರುಸ್‌ನಲ್ಲಿ ಮುಸ್ಲಿಮರು ಮಾತ್ರವಲ್ಲದೆ ಅನ್ಯಧರ್ಮಿಯರೂ ಪಾಲ್ಗೊಳ್ಳುತ್ತಾರೆ.
ಉರುಸ್ ಅಂಗವಾಗಿ ಮಂಗಳವಾರ ಬೆಳಿಗ್ಗೆ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸುತ್ತಮುತ್ತಲ ಗ್ರಾಮಗಳಿಂದ ಅಲ್ಲದೆ, ಪಕ್ಕದ ಆಂಧ್ರಪ್ರದೇಶದ ಜಿಲ್ಲೆಗಳಿಂದಲೂ ಭಕ್ತರು ಆಗಮಿಸುತ್ತಾರೆ.
ದರ್ಗಾದಲ್ಲಿ ಕೋರಿಕೆಗಳನ್ನು ಸಲ್ಲಿಸಿದರೆ ಅವು ಈಡೇರುತ್ತವೆ ಎಂಬುದು ಇಲ್ಲಿನ ಭಕ್ತರ ನಂಬಿಕೆ. ಉರುಸ್ ಪ್ರಯುಕ್ತ ದರ್ಗಾವನ್ನು ತಳಿರು– ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ವರ್ಣರಂಜಿತ ವಿದ್ದುದ್ದೀಪಗಳಿಂದ ದರ್ಗಾ ಕಂಗೊಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.