ADVERTISEMENT

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ: ಜಿಲ್ಲಾ ಮಟ್ಟದ ಕಾರ್ಯಕಾರಿಣಿ 10ರಂದು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 6:33 IST
Last Updated 8 ಮಾರ್ಚ್ 2021, 6:33 IST
   

ಬಳ್ಳಾರಿ: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಜಿಲ್ಲಾ ಮಟ್ಟದ ಕಾರ್ಯಕಾರಿಣಿ ಸಭೆಯು ಮಾ. 10ರಂದು ನಗರದ ಗುರು ಫಂಕ್ಷನ್ ಹಾಲ್ ನಲ್ಲಿ ನಡೆಯಲಿದೆ ಎಂದು ಮೋರ್ಚಾದ ಅಧ್ಯಕ್ಷಸಿ.ಇಬ್ರಾಹಿಂ, ಉಪಾಧ್ಯಕ್ಷ ನೀಲೇಶ್ ಜೈನ್ ತಿಳಿಸಿದರು.

'ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಮುಜಮ್ಮಿಲ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಸಯ್ಯದ್ ಸಲಾಂ, ಉಪಾಧ್ಯಕ್ಷ ನೂರ್ ಭಾಷಾ ಪಾಲ್ಗೊಳ್ಳಲಿದ್ದಾರೆ. ಶಾಸಕ‌ಜಿ.ಸೋಮಶೇಖರ ರೆಡ್ಡಿ ಉದ್ಘಾಟಿಸಲಿದ್ದಾರೆ' ಎಂದು ನಗರದಲ್ಲಿ‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

'ಹಜ್ ಸಮಿತಿ‌ ಸದಸ್ಯ ಮೈನುದ್ದೀನ್, ರಾಜ್ಯ ಕಾರ್ಯದರ್ಶಿ ಶಾಹೀನಾ ಅಬ್ಬಾಸ್ ಅವರೊಂದಿಗೆಜಿಲ್ಲೆಯ ಎಲ್ಲ ಮಂಡಳಗಳ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ' ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.