ADVERTISEMENT

ಬಳ್ಳಾರಿ: ಮತದಾನ ಮುಗಿದ ಬಳಿಕ ವಿಶ್ರಾಂತಿಯಲ್ಲಿ ಅಭ್ಯರ್ಥಿಗಳು...

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2018, 10:57 IST
Last Updated 4 ನವೆಂಬರ್ 2018, 10:57 IST
ಮತದಾನದ ಮಾರನೇ ದಿನವಾದ ಭಾನುವಾರ ಬಳ್ಳಾರಿಯ ನಕ್ಷತ್ರ ಹೋಟೆಲ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಪ್ರಜಾವಾಣಿ ಓದಿ ಕಾಲಕಳೆದರು. 
ಮತದಾನದ ಮಾರನೇ ದಿನವಾದ ಭಾನುವಾರ ಬಳ್ಳಾರಿಯ ನಕ್ಷತ್ರ ಹೋಟೆಲ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಪ್ರಜಾವಾಣಿ ಓದಿ ಕಾಲಕಳೆದರು.    

ಬಳ್ಳಾರಿ: ಶನಿವಾರ ಮತದಾನ ಮುಗಿದ ಬಳಿಕ ಲೋಕಸಭೆ ಕ್ಷೇತ್ರದ ಉಪಚುನಾವಣೆಯ ಅಭ್ಯರ್ಥಿಗಳು ಭಾನುವಾರ ವಿಶ್ರಾಂತಿ ಪಡೆದರು.

ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಬೆಳಿಗ್ಗೆ ನಕ್ಷತ್ರ ಹೋಟೆಲ್‌ನಲ್ಲೇ ಉಪಾಹಾರ ಸೇವಿಸಿ, ಎಲ್ಲ ದಿನಪತ್ರಿಕೆಗಳನ್ನು ಓದಿದರು. ಕೆಲ ಕಾಲ ವಾಹಿನಿಗಳಲ್ಲಿ ಸುದ್ದಿ ವೀಕ್ಷಿಸಿದರು.

ನಂತರ ಹಡಗಲಿಗೆ ತೆರಳಿದ ಅವರು ಮಾಜಿ ಶಾಸಕ ಎಂ.ಪಿ.ರವೀಂದ್ರ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡರು. ನಂತರ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಅವರ ಮನೆಗೆ ಭೇಟಿ ನೀಡಿ ಕೆಲ ಕಾಲ ವಿಶ್ರಾಂತಿ ಪಡೆದರು. ಸಂಜೆ ವೇಳೆಗೆ ನಗರಕ್ಕೆ ಬಂದು ವಿಶ್ರಾಂತಿ ಪಡೆದರು.

ADVERTISEMENT

ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ನಗರದ ಬ್ಯಾಂಕ್‌ ಕಾಲೊನಿಯಲ್ಲಿರುವ ತಮ್ಮ ಮನೆಯಲ್ಲೇ ಇಡೀ ದಿನ ವಿಶ್ರಾಂತಿ ಪಡೆದರು. ಮನೆ ಬಿಟ್ಟು ಹೊರಗೆ ಬರಲಿಲ್ಲ. ಅವರ ಸಹೋದರ ಶಾಸಕ ಬಿ.ಶ್ರೀರಾಮುಲು ಹಡಗಲಿಗೆ ತೆರಳಿ ರವೀಂದ್ರ ಅವರ ಅಂತಿಮ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.