ADVERTISEMENT

ಪೌರತ್ವ ತಿದ್ದುಪಡಿ ಕಾನೂನು ವಿರೋಧಿಸಿ ಅಭಿಯಾನ ಜನವರಿ 26ರಿಂದ

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 7:44 IST
Last Updated 25 ಜನವರಿ 2020, 7:44 IST

ಬಳ್ಳಾರಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದಲ್ಲಿ ಜನವರಿ 26ರಿಂದ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ವೆಲ್ ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ವಲಯ ಸಂಚಾಲಕ ರಾಜ ನಾಯ್ಕ ತಿಳಿಸಿದರು.

26ರಂದು ಕೌಲ್ ಬಜಾರ್ ಮೊದಲ‌ ರೈಲು ಗೇಟ್ ಸಮೀಪ ಮಾನವ ಸರಪಳಿ ರಚಿಸಲಾಗುವುದು ಹಾಗೂ ಕಾಯ್ದೆ ವಿರೋಧಿಸಿ ಪ್ರಮಾಣ ವಚನ ಸ್ವೀಕರಿಸಲಾಗುವುದು ಎಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜನವರಿ 27ರಂದು ಸಂಜೆ ಕೌಲ್ ಬಜಾರ್‌ನಲ್ಲಿ ಮೇಣದ ಬತ್ತಿ ಮೆರವಣಿಗೆ, 28 ರಂದು ಕೌಲಬಜಾರಿಂದ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ನಡೆಸಲಾಗುವುದು. 29ರಂದು ಅಲ್ಲಿಯೇ ಧರಣಿ ನಡೆಸಲಾಗುವುದು. ನಂತರ ನಗರದಲ್ಲಿ ಮನೆಗಳಿಗೆ ಭೇಟಿ ನೀಡಿ ಸಿಎಎ ವಿರುದ್ಧ ಜಾಗೃತಿ ಮೂಡಿಸಲಾಗುವುದು ಎಂದರು.
ಮುಖಂಡರಾದ ಅಬ್ದುಲ್ ಖಾಲಿದ್, ಶೇಕ್ ಇಬಾದ್ ಉಲ್ಲಾ, ಸೈಯದ್ ಅಂಜನ್ ಹುಸೇನ್‌ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.