ADVERTISEMENT

ಕ್ಯಾಂಪಸ್‌ ಫ್ರಂಟ್‌ ಸದಸ್ಯತ್ವ ಅಭಿಯಾನ

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 13:26 IST
Last Updated 2 ಜುಲೈ 2019, 13:26 IST
ಸದಸ್ಯತ್ವದ ಚೀಟಿ ವಿತರಿಸಿ ‘ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಕರ್ನಾಟಕ’ದ ಸದಸ್ಯತ್ವ ಅಭಿಯಾನಕ್ಕೆ ಸಂಘಟನೆಯ ರಾಜ್ಯ ಅಧ್ಯಕ್ಷ ಫಯಾಜ್‌ ದೊಡ್ಡಮನೆ ಚಾಲನೆ ನೀಡಿದರು
ಸದಸ್ಯತ್ವದ ಚೀಟಿ ವಿತರಿಸಿ ‘ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಕರ್ನಾಟಕ’ದ ಸದಸ್ಯತ್ವ ಅಭಿಯಾನಕ್ಕೆ ಸಂಘಟನೆಯ ರಾಜ್ಯ ಅಧ್ಯಕ್ಷ ಫಯಾಜ್‌ ದೊಡ್ಡಮನೆ ಚಾಲನೆ ನೀಡಿದರು   

ಹೊಸಪೇಟೆ: ‘ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಕರ್ನಾಟಕ’ದ ಸದಸ್ಯತ್ವ ಅಭಿಯಾನಕ್ಕೆ ಇತ್ತೀಚೆಗೆ ನಗರದಲ್ಲಿ ಚಾಲನೆ ನೀಡಲಾಯಿತು.

ನಗರದ ಮದಕರಿ ನಾಯಕ ವೃತ್ತದಿಂದ ತ್ವಾಹಾ ಪ್ರೌಢಶಾಲೆಯ ವರೆಗೆ ವಿದ್ಯಾರ್ಥಿಗಳು ರ್‍ಯಾಲಿ ನಡೆಸಿದರು. ಬಳಿಕ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಫಯಾಜ್‌ ದೊಡ್ಡಮನೆ ಅಭಿಯಾನ ಉದ್ಘಾಟಿಸಿ, ಸದಸ್ಯತ್ವದ ಚೀಟಿ ವಿತರಿಸಿದರು.

ಬಳಿಕ ಮಾತನಾಡಿ, ‘ದೇಶದಲ್ಲಿ ಹಲವು ಸಂಸ್ಕೃತಿ, ಭಾಷೆಗಳಿವೆ. ಆದರೆ ಕೇಂದ್ರ ಸರ್ಕಾರ ಬಲವಂತವಾಗಿ ಹಿಂದಿ ಭಾಷೆ ಹೇರುತ್ತಿದೆ. ಒಂದೇ ಸಂಸ್ಕೃತಿ ಹೇರುವ ಹುನ್ನಾರ ನಡೆಸುತ್ತಿದೆ. ಪ್ರಜಾಪ್ರಭುತ್ವ ಡೋಲಾಯಮಾನ ಸ್ಥಿತಿಯಲ್ಲಿದೆ. ದಲಿತರು, ಬಡವರು, ಅಲ್ಪಸಂಖ್ಯಾತರ ಬಗ್ಗೆ ಯಾರು ಧ್ವನಿ ಎತ್ತುತ್ತಾರೋ ಅವರನ್ನು ದೇಶದ್ರೋಹಿಗಳಂತೆ ಬಿಂಬಿಸಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

ರಾಜ್ಯ ಕಾರ್ಯದರ್ಶಿ ಅಶ್ರಫ್ ದಾವಣಗೆರೆ, ಜಿಲ್ಲಾ ಅಧ್ಯಕ್ಷ ಮೊಹಮ್ಮದ್ ಗೌಸ್, ರಾಜ್ಯ ಸಮತಿ ಸದಸ್ಯರಾದ ಅಲ್ತಾಫ್, ಪಿ.ಜೆ. ಇಮ್ರಾನ್, ಜಿಲ್ಲಾ ಕಾರ್ಯದರ್ಶಿ ಸಲೀಂ ಮಲಿಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.