ADVERTISEMENT

ಸಂಭ್ರಮದಿಂದ ಕಾರ್‌ ಹುಣ್ಣಿಮೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 13:45 IST
Last Updated 17 ಜೂನ್ 2019, 13:45 IST
ಕಾರ್‌ ಹುಣ್ಣಿಮೆ ಪ್ರಯುಕ್ತ ಸೋಮವಾರ ಸಂಜೆ ಹೊಸಪೇಟೆಯಲ್ಲಿ ಎತ್ತಿನ ಬಂಡಿಗಳ ಮೆರವಣಿಗೆ ಮಾಡಲಾಯಿತು
ಕಾರ್‌ ಹುಣ್ಣಿಮೆ ಪ್ರಯುಕ್ತ ಸೋಮವಾರ ಸಂಜೆ ಹೊಸಪೇಟೆಯಲ್ಲಿ ಎತ್ತಿನ ಬಂಡಿಗಳ ಮೆರವಣಿಗೆ ಮಾಡಲಾಯಿತು   

ಹೊಸಪೇಟೆ: ಕಾರ್‌ ಹುಣ್ಣಿಮೆಯನ್ನು ನಗರ ಸೇರಿದಂತೆ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಸೋಮವಾರ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ಎತ್ತು ಹಾಗೂ ಚಕ್ಕಡಿಯನ್ನು ವಿಶೇಷ ರೀತಿಯಲ್ಲಿ ಅಲಂಕರಿಸಿ, ಅದಕ್ಕೆ ಪೂಜೆ ನೆರವೇರಿಸಿ ಮೆರವಣಿಗೆ ಮಾಡಿದರು. ಇಲ್ಲಿನ ಎತ್ತಿನ ಬಂಡಿ ಯುವಕರ ಸಂಘವು ಸೋಮವಾರ ಸಂಜೆ ನಗರದಲ್ಲಿ ಎತ್ತಿನ ಬಂಡಿ ಓಡಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಎ.ಪಿ.ಎಂ.ಸಿ.ಯಿಂದ ಆರಂಭಗೊಂಡ ಮೆರವಣಿಗೆಯು ವಾಲ್ಮೀಕಿ ವೃತ್ತ, ಏಳುಕೇರಿಗಳ ಮೂಲಕ ಹಾದು ಮಾರುಕಟ್ಟೆ ಬಳಿ ಕೊನೆಗೊಂಡಿತು.

ಯುವಕರು, ವಯಸ್ಕರು ಸಂಭ್ರಮದಿಂದ ಚಕ್ಕಡಿ ಓಡಿಸಿ ಸಂಭ್ರಮಿಸಿದರು. ಚಿಣ್ಣರು ಬಲೂನ್‌ಗಳನ್ನು ಹಿಡಿದುಕೊಂಡು ಚಕ್ಕಡಿಯಲ್ಲಿ ಕುಳಿತಿದ್ದರು. ಚಕ್ಕಡಿಗಳು ಸಾಲಾಗಿ ಹೋಗುತ್ತಿರುವುದನ್ನು ನೋಡಿ ಸಾರ್ವಜನಿಕರು ಮೊಬೈಲ್‌ಗಳಲ್ಲಿ ಚಿತ್ರ ಸೆರೆ ಹಿಡಿದರು.

ADVERTISEMENT

ತಾಲ್ಲೂಕಿನ ಹೊಸೂರು, ಮಲಪನಗುಡಿ, ಬೈಲುವದ್ದಿಗೇರಿ, ಧರ್ಮಸಾಗರ ಸೇರಿದಂತೆ ಹಲವೆಡೆ ಕಾರ್‌ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.