ADVERTISEMENT

ಜಾತಿ, ಆದಾಯ ಪ್ರಮಾಣಪತ್ರ ಪಡೆದ ಹಕ್ಕಿಪಿಕ್ಕಿ ಕುಟುಂಬ

​ಪ್ರಜಾವಾಣಿ ವಾರ್ತೆ
Published 8 ಜನವರಿ 2025, 16:19 IST
Last Updated 8 ಜನವರಿ 2025, 16:19 IST
ಕುರುಗೋಡು ಸಮೀಪದ ಸಿರಿಗೇರಿ ಗ್ರಾಮದ ಹಕ್ಕಿಪಿಕ್ಕಿ ಸಮುದಾಯದವರು ಜಾತಿ ಮತ್ತು ಪ್ರಮಾಣ ಪತ್ರ ಪಡೆದರು
ಕುರುಗೋಡು ಸಮೀಪದ ಸಿರಿಗೇರಿ ಗ್ರಾಮದ ಹಕ್ಕಿಪಿಕ್ಕಿ ಸಮುದಾಯದವರು ಜಾತಿ ಮತ್ತು ಪ್ರಮಾಣ ಪತ್ರ ಪಡೆದರು   

ಕುರುಗೋಡು: ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮದ ಹಕ್ಕಿಪಿಕ್ಕಿ ಜನಾಂಗದ ನಾಲ್ಕು ಕುಟುಂಬಗಳಿಗೆ ಸಿರುಗುಪ್ಪ ತಹಶೀಲ್ದಾರ್ ವಿಶ್ವನಾಥ ಅವರು ಬುಧವಾರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿತರಿಸಿದರು.

ಐದು ದಶಕಗಳಿಂದ ಗ್ರಾಮದ ಜನತಾ ಕಾಲೊನಿಯಲ್ಲಿ ವಾಸವಿದ್ದ ಇವರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ದೊರೆಯದ ಕಾರಣ ಪಡಿತರ ಚೀಟಿ ದೊರೆತಿರಲಿಲ್ಲ. ಅವರ ಮಕ್ಕಳು ವಿದ್ಯಾರ್ಥಿ ವೇತನದಿಂದ ವಂಚಿತರಾಗಿದ್ದರು.

ಈ ಸಮಾಜದವರು ಎದುರಿಸುತ್ತಿರುವ ಸಮಸ್ಯೆ ಕುರಿತು ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ ಭಂಡಾರಿ ಅವರು ಕಂದಾಯ ಇಲಾಖೆ ಮತ್ತು ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ರಾಘವೇಂದ್ರ ಶರ್ಮ ಅವರ ಗಮನ ಸೆಳೆದಿದ್ದರು.

ADVERTISEMENT

ಎಂ ನಾಗಮ್ಮ, ವೆಂಕಟೇಶ್, ಗೋಪಾಲ, ಜಿ.ಕೆ. ವೆಂಕಟೇಶ್, ರೋಜಾ, ಮರಾಠ ಐಶ್ವರ್ಯ, ಮೋಕ್ಷ, ಕ್ರಿಷ್ ಮತ್ತು ಅನಿಲ್ ಇವರು ಜಾತಿ ಪ್ರಮಾಣ ಪತ್ರ ಪಡೆದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.