ADVERTISEMENT

ಅಂಧರ ಚದುರಂಗ ಸ್ಪರ್ಧೆ ಆರಂಭ

​ಪ್ರಜಾವಾಣಿ ವಾರ್ತೆ
Published 27 ಮೇ 2022, 15:26 IST
Last Updated 27 ಮೇ 2022, 15:26 IST
ಹೊಸಪೇಟೆಯಲ್ಲಿ ಶುಕ್ರವಾರ ಅಂಧರ ಚದುರಂಗ ಸ್ಪರ್ಧೆ ಆರಂಭಗೊಂಡಿತು
ಹೊಸಪೇಟೆಯಲ್ಲಿ ಶುಕ್ರವಾರ ಅಂಧರ ಚದುರಂಗ ಸ್ಪರ್ಧೆ ಆರಂಭಗೊಂಡಿತು   

ಹೊಸಪೇಟೆ (ವಿಜಯನಗರ): ಸೇವಿಯರ್‌ ಅಂಗವಿಕಲರ ಸೇವಾ ಸಮಿತಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಮೂರು ದಿನಗಳ ಅಂಧರ ಚದುರಂಗ ಸ್ಪರ್ಧೆಗೆ ಶುಕ್ರವಾರ ನಗರದಲ್ಲಿ ಚಾಲನೆ ನೀಡಲಾಯಿತು.

ಸ್ಪರ್ಧೆಗೆ ನೋಂದಣಿ ಮಾಡಿಸಿದ್ದ 168 ಸ್ಪರ್ಧಿಗಳಲ್ಲಿ 158 ಜನ ಹಾಜರಾಗಿದ್ದರು. ಮೊದಲ ದಿನ ಶಿವಮೊಗ್ಗದ ಕಿಶನ್‌ ಗಂಗೂಲಿ 2092 ಅಂಕ ಗಳಿಸಿ ಉತ್ತಮ ಸಾಧನೆ ತೋರಿದರು. ಶಿವಮೊಗ್ಗದ ಕೃಷ್ಣ ಉಡುಪ 1664 ಅಂಕ, ಬೆಂಗಳೂರಿನ ಖೆತ್ರೆ ಗೌರವ್‌ 1,540 ಅಂಕ ಗಳಿಸಿದರು.

ಶನಿವಾರ, ಭಾನುವಾರ ಗಳಿಸುವ ಅಂಕಗಳನ್ನು ಆಧರಿಸಿ ವಿಜೇತರನ್ನು ಘೋಷಿಸಲಾಗುತ್ತದೆ. ಮೊದಲ ದಿನ ರಾಜ್ಯದ ವಿವಿಧ ಭಾಗಗಳ ಸ್ಪರ್ಧಿಗಳು ಪಾಲ್ಗೊಂಡಿದ್ದರು. 18 ವರ್ಷದೊಳಗಿನ ಹಾಗೂ 18 ವರ್ಷ ಮೇಲಿನವರ ಮುಕ್ತ ಪಂದ್ಯಾವಳಿ ಇದಾಗಿದ್ದು, ಒಟ್ಟು ಒಂಬತ್ತು ಸುತ್ತುಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದು ಸೇವಿಯರ್ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಿ.ಎನ್‌.ಸಂತೋಷ್ ಕುಮಾರ್ ತಿಳಿಸಿದರು.

ADVERTISEMENT

ಬಿಜೆಪಿ ಯುವ ಮುಖಂಡ ಸಿದ್ದಾರ್ಥ ಸಿಂಗ್‌ ಉದ್ಘಾಟಿಸಿದರು. ಅಂಧರ ಚದುರಂಗ ಸ್ಪರ್ಧೆಯ ರಾಷ್ಟ್ರೀಯ ಉಪಾಧ್ಯಕ್ಷ ಕಿಶನ್ ಗಂಗೂಲಿ, ಚೆಸ್ ಆಟಗಾರರಾದ ಕೃಷ್ಣ ಉಡುಪ, ಮಂಜುನಾಥ್, ವೀರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.