ADVERTISEMENT

ಮರಿಯಮ್ಮನಹಳ್ಳಿ | ಚಿಕಿತ್ಸೆಗೆ ಸ್ಪಂದಿಸದೇ ಬಾಲಕಿ ಸಾವು

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 5:58 IST
Last Updated 12 ಜನವರಿ 2026, 5:58 IST
<div class="paragraphs"><p>ಸಾವು&nbsp; (ಪ್ರಾತಿನಿಧಿಕ ಚಿತ್ರ)</p></div>

ಸಾವು  (ಪ್ರಾತಿನಿಧಿಕ ಚಿತ್ರ)

   

ಮರಿಯಮ್ಮನಹಳ್ಳಿ: ಮನೆಯ ಮಾಳಿಗೆಯ ಮೇಲಿನಿಂದ ಬಿದ್ದು ತೀವ್ರಗಾಯಗೊಂಡು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂರು ವರ್ಷದ ಬಾಲಕಿಯೊಬ್ಬಳು ಚಿಕಿತ್ಸೆ ಫಲಿಸದೆ ಶುಕ್ರವಾರ ತಡರಾತ್ರಿ ಸಾವನ್ನಪ್ಪಿದ್ದಾಳೆ.

ಸಮೀಪದ ಜಿ.ನಾಗಲಾಪುರ ತಾಂಡಾದ ಲೋಕೇಶ್‍ನಾಯ್ಕ ಅವರ ಪುತ್ರಿ ಕುಮಾರಿ ಮಯೂರಿ(3) ಮೃತಪಟ್ಟ ಬಾಲಕಿ.

ADVERTISEMENT

ಕುಮಾರಿ ಮಯೂರಿ ಅದೇ ತಾಂಡಾದ ಸುಮಿತ್ರಾ ಅವರ ಮಗನೊಂದಿಗೆ ಶುಕ್ರವಾರ ಸಂಜೆ ರಾಮಾನಾಯ್ಕ ಎನ್ನುವರ ಮನೆಯ ಮಾಳಿಗೆಯನ್ನು ಹತ್ತಿ ಸ್ಟೇರ್‍ಕೇಸ್‍ನಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತೀವ್ರಗಾಯಗೊಂಡಿದ್ದಾಳೆ.

ಹೆಚ್ಚಿನ ಚಿಕಿತ್ಸೆಗಾಗಿ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಿಂದ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ತಡರಾತ್ರಿ ಮೃತಪಟ್ಟಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.