
ಪ್ರಜಾವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಬಂಡಿಹಳ್ಳಿ ಕೆರೆಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಪಟ್ಟಣದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ.
ಮೃತ ಯು.ಪೃಥ್ವಿ (10) ದುರ್ದೈವಿ, ಶಿಕ್ಷಕ ಯು.ಗೋಣಿಬಸಪ್ಪ ಅವರ ಪುತ್ರ. ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಸಿಬಿಎಸ್ಇ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ. ತರಗತಿಯ ಐದು ಜನ ಸ್ನೇಹಿತರೊಂದಿಗೆ ಈಜಲು ಕೆರೆಗೆ ತೆರಳಿದ್ದರು.
ಮುಳುಗುತ್ತಿದ್ದ ಇನ್ನೊಬ್ಬ ಬಾಲಕ ಆಕಾಶ್ ಎನ್ನುವವನ್ನು ಅಲ್ಲಿದ್ದ ಕುರಿಗಾಹಿಗಳು ರಕ್ಷಿಸಿದ್ದಾರೆ. ಇನ್ನೂ ಮೂವರು ಬಾಲಕರು ಇನ್ನೂ ನೀರಿಗೆ ಇಳಿದಿರಲಿಲ್ಲ, ಪೃಥ್ವಿ ಮತ್ತು ಆಕಾಶ್ ಮುಳುಗಿದ್ದನ್ನು ನೋಡಿ ಭಯದಿಂದ ಓಡಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತಂತೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.