
ಹೊಸಪೇಟೆ: ‘ಗ್ರೀನ್ ಹೊಸಪೇಟೆ’ ಸಂಸ್ಥೆ ಕಾರ್ಯಕರ್ತರಿಂದ ಮಂಗಳವಾರ ಇಲ್ಲಿನ ಚಪ್ಪರದಹಳ್ಳಿಯ ತಾಹಾ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಆವರಣ ಹಾಗೂ ಸುತ್ತಮುತ್ತಲಿನ ಸ್ಥಳದಲ್ಲಿ ಸ್ವಚ್ಛತಾ ಕೆಲಸ ನಡೆಯಿತು.
ಕಾರ್ಯಕರ್ತರು ಇಡೀ ಶಾಲೆಯ ಆವರಣದಲ್ಲಿ ಬೆಳೆದಿದ್ದ ಮುಳ್ಳು, ಕಂಟಿ, ಕಸ ಕಡ್ಡಿ ತೆರವುಗೊಳಿಸಿದರು. ಬಳಿಕ ಶಾಲೆಯ ಸುತ್ತಲೂ ಬೇಕಾಬಿಟ್ಟಿ ಬಿಸಾಕಿದ್ದ ತ್ಯಾಜ್ಯವನ್ನು ಸಂಗ್ರಹಿಸಿ ಬೇರೆಡೆ ವಿಲೇವಾರಿ ಮಾಡಿದರು.
ನಂತರ ಚಪ್ಪರದಹಳ್ಳಿ, ಎಸ್.ಆರ್. ನಗರದಲ್ಲಿ ಶಾಲಾ ಮಕ್ಕಳೊಂದಿಗೆ ಜನಜಾಗೃತಿ ರ್‍ಯಾಲಿ ಮಾಡಿದರು. ‘ಯಾರು ರಸ್ತೆಯ ಮೇಲೆ ಕಸ ಚೆಲ್ಲಬಾರದು. ನಗರಸಭೆಯ ವಾಹನಗಳಲ್ಲಿಯೇ ತ್ಯಾಜ್ಯ ಹಾಕಬೇಕು’ ಎಂದು ಕೋರಿದರು.
ಸಂಸ್ಥೆ ಅಧ್ಯಕ್ಷ ಸುನೀಲಗೌಡ, ಉಪಾಧ್ಯಕ್ಷ ಎಂ. ಮಂಜುನಾಥ, ಪ್ರಭಾಕರ್, ಶಶಿಕುಮಾರ, ನಾಗ, ವೈಷ್ಣವಿ, ಪಲ್ಲವಿ, ನಕಾಶ, ಮನು, ನಗರಸಭೆ ಸದಸ್ಯ ದಾದಾ ಕಲಂದರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.