ADVERTISEMENT

ಸಾಮೂಹಿಕ ಭೋಜನ, ಸಂವಿಧಾನದ ಓದು

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 13:28 IST
Last Updated 29 ಡಿಸೆಂಬರ್ 2019, 13:28 IST
ಹೊಸಪೇಟೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲಂಬಾಣಿ, ಮುಸ್ಲಿಂ ಹಾಗೂ ದಲಿತ ಸಮುದಾಯದ ಮಹಿಳೆಯರು ವಿಶ್ವ ಮಾನವ ದಿನಾಚರಣೆಯಲ್ಲಿ ಭಾಗವಹಿಸಿ ಐಕ್ಯತೆ ತೋರಿದರು
ಹೊಸಪೇಟೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲಂಬಾಣಿ, ಮುಸ್ಲಿಂ ಹಾಗೂ ದಲಿತ ಸಮುದಾಯದ ಮಹಿಳೆಯರು ವಿಶ್ವ ಮಾನವ ದಿನಾಚರಣೆಯಲ್ಲಿ ಭಾಗವಹಿಸಿ ಐಕ್ಯತೆ ತೋರಿದರು   

ಹೊಸಪೇಟೆ: ವಿಶ್ವ ಮಾನವ ದಿನಾಚರಣೆ ಪ್ರಯುಕ್ತ ಭಾನುವಾರ ನಗರ ಹೊರವಲಯದ ಸಂಕ್ಲಾಪುರದಲ್ಲಿ ಸಾಮೂಹಿಕ ಸಹಸ್ರ ಭೋಜನ, ಸಂವಿಧಾನದ ಓದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕುವೆಂಪು ರಚಿತ ‘ಓ ನನ್ನ ಚೇತನ’ ಗೀತೆ ಹಾಡುವುದರೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ‘ಸರ್ವ ಜನಾಂಗದ ಶಾಂತಿಯ ತೋಟ’ ಘೋಷಣೆಗಳನ್ನು ಕೂಗಿದರು. ಸಾಂಪ್ರದಾಯಿಕ ಲಂಬಾಣಿ ದಿರಿಸಿ ಹಾಕಿಕೊಂಡು ಬಂಜಾರ ಸಮುದಾಯದ ಮಹಿಳೆಯರು, ಮುಸ್ಲಿಂ, ದಲಿತ ಸಮುದಾಯದ ಹೆಣ್ಣು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಳಿಕ ಪರಸ್ಪರ ಕೈತುತ್ತು ತಿಂದು, ಸೌಹಾರ್ದತೆ ಮೆರೆದರು.

ಮಹಿಳೆಯರು ಕೂಲಿಗೆ ಹೋಗದೆ, ಕಾರ್ಯಕ್ರಮದಲ್ಲಿ ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಿದರು. ಭಾರತ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷೆ ಎಚ್‌. ಸೌಭಾಗ್ಯಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ಟಿ.ಎಂ. ಉಷಾರಾಣಿ ಇದ್ದರು. ಸಂಜೆ ಶಿರಸಿನಕಲ್ಲು ಬಡಾವಣೆಯಲ್ಲೂ ಸಹಸ್ರ ಭೋಜನ ಕಾರ್ಯಕ್ರಮ ಜರುಗಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.