ADVERTISEMENT

ಹೊಸಪೇಟೆಯಲ್ಲಿ ಸತತ ಮಳೆ: ಮೂರು ಮನೆ ಕುಸಿತ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 12:15 IST
Last Updated 27 ಸೆಪ್ಟೆಂಬರ್ 2020, 12:15 IST
ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿ ಈ. ವೀರೇಶ ಎಂಬುವರಿಗೆ ಸೇರಿದ ಮನೆ ಭಾನುವಾರ ಕುಸಿದು ಬಿದ್ದಿದೆ
ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿ ಈ. ವೀರೇಶ ಎಂಬುವರಿಗೆ ಸೇರಿದ ಮನೆ ಭಾನುವಾರ ಕುಸಿದು ಬಿದ್ದಿದೆ   

ಹೊಸಪೇಟೆ: ಬಳ್ಳಾರಿ ಜಿಲ್ಲೆಯ ಕೆಲವೆಡೆ ಸತತ ಮೂರನೇ ದಿನವೂ ಮಳೆ ಮುಂದುವರೆದಿದೆ. ಮತ್ತೆ ಹಲವೆಡೆ ಬಿಡುವು ಕೊಟ್ಟಿದೆ.

ಜಿಲ್ಲೆಯ ಹೊಸಪೇಟೆ, ಕಂಪ್ಲಿ ನಗರ ಹಾಗೂ ತಾಲ್ಲೂಕಿನ ಸುತ್ತಮುತ್ತ ಭಾನುವಾರವೂ ಉತ್ತಮ ಮಳೆಯಾಗಿದೆ. ಬೆಳಿಗ್ಗೆ ದಟ್ಟ ಕಾರ್ಮೋಡ ಕವಿದಿತ್ತು. ವಾತಾವರಣ ತಂಪಾಗಿತ್ತು. ಮಧ್ಯಾಹ್ನ ಆರಂಭಗೊಂಡ ಮಳೆ ಸಂಜೆಯೂ ಮುಂದುವರೆದಿತ್ತು.

ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿ ಎರಡು, ಅಯ್ಯನಹಳ್ಳಿ ಗ್ರಾಮದಲ್ಲಿ ಒಂದು ಮನೆ ಭಾನುವಾರ ಕುಸಿದು ಬಿದ್ದಿದೆ.

ADVERTISEMENT

ಭಾನುವಾರ ರಜಾ ದಿನವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಂಪಿಗೆ ಬಂದಿದ್ದರು. ಮಧ್ಯಾಹ್ನ ಮಳೆ ಬಂದರೂ ಜನ ಅದನ್ನು ಲೆಕ್ಕಿಸದೆ ಸ್ಮಾರಕಗಳನ್ನು ಕಣ್ತುಂಬಿಕೊಂಡರು.

ಇನ್ನೂ ಜಿಲ್ಲೆಯ ಬಳ್ಳಾರಿ, ಕೂಡ್ಲಿಗಿ, ಕುರುಗೋಡು, ಸಂಡೂರು, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಸಿರುಗುಪ್ಪದಲ್ಲಿ ಮಳೆ ಬಿಡುವು ಕೊಟ್ಟಿದೆ. ಆದರೆ, ದಟ್ಟ ಮೋಡ ಕವಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.