ADVERTISEMENT

ಪಕ್ಷಗಳ ನಡುವೆ ಸಮನ್ವಯ ಸಾಧಿಸುವುದಷ್ಟೇ ಸಮನ್ವಯ‌ ಸಮಿತಿ ಕೆಲಸ : ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2018, 10:11 IST
Last Updated 27 ಆಗಸ್ಟ್ 2018, 10:11 IST
ಕನಕದಾಸ ಪುತ್ಥಳಿ ಅನಾವರಣಕ್ಕೆ‌ ಬಂದ ‌ಸಿದ್ದರಾಮಯ್ಯ ಅವರನ್ನು‌ ಮೆರವಣಿಗೆ‌ ಮೂಲಕ ‌‌ಕರೆತಂದ‌ ನಗರದ‌ ಬಂಡಿಹಟ್ಠಿ‌ ಪ್ರದೇಶದ ಜನ
ಕನಕದಾಸ ಪುತ್ಥಳಿ ಅನಾವರಣಕ್ಕೆ‌ ಬಂದ ‌ಸಿದ್ದರಾಮಯ್ಯ ಅವರನ್ನು‌ ಮೆರವಣಿಗೆ‌ ಮೂಲಕ ‌‌ಕರೆತಂದ‌ ನಗರದ‌ ಬಂಡಿಹಟ್ಠಿ‌ ಪ್ರದೇಶದ ಜನ   

ಬಳ್ಳಾರಿ :ಸರ್ಕಾರದಲ್ಲಿಎರಡು ‌ಪಕ್ಷಗಳ‌ ನಡುವೆ‌ ಸಮನ್ವಯ ಸಾಧಿಸುವುದಷ್ಟೇ ಸಮನ್ವಯ‌ ಸಮಿತಿಯ‌ ಕೆಲಸ ಎಂದು‌ ಸಮಿತಿ‌ಯಅಧ್ಯಕ್ಷ‌ ಸಿದ್ದರಾಮಯ್ಯ‌ರವರುಹೇಳಿದರು.

ಕನಕದಾಸ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಬಳ್ಳಾರಿಗೆ ಆಗಮಿಸಿದ್ದಸಿದ್ದರಾಮಯ್ಯ ಅವರನ್ನುಸಮನ್ವಯ ಸಮಿತಿ ನಿರ್ಧರಿಸಿದರೆ‌ ನೀವು ಮತ್ತೆ‌ ಮುಖ್ಯಮಂತ್ರಿಯಾಗುವಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ‌ ಪ್ರತಿಕ್ರಿಯಿಸಿದ ಅವರು, ‘ಅದೆಲ್ಲ ಸಮಿತಿಯಲ್ಲಿ‌ ಚರ್ಚೆಯಾಗಲ್ಲ‌’ಎಂದರು.

ಜೆಡಿಎಸ್‌ ಅನ್ನು ಬೆಂಬಲಿಸಬೇಕೆನ್ನುವುದು ‌ಕಾಂಗ್ರೆಸ್ ಹೈಮಾಂಡ್ ತೀರ್ಮಾನ. ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ವಿಶ್ವನಾಥ್ ಅವರನ್ನು ಸಮಿತಿಗೆ ಸೇರ್ಪಡೆಗೊಳಿಸುವ ‌ವಿಚಾರವೂ ಹೈಕಮಾಂಡ್‌ಗೆ ಬಿಟ್ಟಿರುವ ವಿಚಾರ ಎಂದು ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.