ತೆಕ್ಕಲಕೋಟೆ: ಸಿರುಗುಪ್ಪ ತಾಲ್ಲೂಕಿನ ಮುದ್ದಟನೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಅರಳಿಗನೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಜೋಳ ಖರೀದಿ ಕೇಂದ್ರ ಆರಂಭಿಸಲಾಗಿದೆ.
ಮುದ್ದಟನೂರು ಗ್ರಾಮದಲ್ಲಿ ಶನಿವಾರ ಜೋಳ ಖರೀದಿ ಕೇಂದ್ರವನ್ನು ಸಹಕಾರ ಸಂಘದ ಅಧ್ಯಕ್ಷ ಟಿ.ಸೂರಿಬಾಬು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ಮುದ್ದಟ್ಟನೂರು, ರುದ್ರಪಾದ, ಮಣ್ಣೂರು, ಸೂಗುರು, ಚನ್ನಪಟ್ಟಣ, ಹಾವಿನಾಳು, ಸಿರಿಗೇರಿ, ವೀರಾಪುರ ಗ್ರಾಮಗಳ ಸುತ್ತಮುತ್ತ ರೈತರಿಗೆ ಈ ಖರೀದಿ ಕೇಂದ್ರದಿಂದ ಅನುಕೂಲವಾಗಲಿದೆ’ ಎಂದರು.
ಪ್ರಸ್ತುತ ಸಿರುಗುಪ್ಪ ತಾಲ್ಲೂಕಿನಲ್ಲಿ ಇರುವ 10 ಖರೀದಿ ಕೇಂದ್ರಗಳ ಜೊತೆಗೆ ಎರಡು ಹೆಚ್ಚುವರಿ ನೋಂದಣಿ ಮತ್ತು ಖರೀದಿ ಕೇಂದ್ರ ತೆರೆಯಲಾಗಿದೆ. ಮುದ್ದಟನೂರು ಕೇಂದ್ರದಲ್ಲಿ ನೂರಕ್ಕು ಹೆಚ್ಚು ಟೋಕನ್ ವಿತರಿಸಲಾಯಿತು. ಅರಳಿಗನೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶನಿವಾರ 130 ಕ್ಕೂ ಹೆಚ್ಚು ಟೋಕನ್ ವಿತರಿಸಲಾಗಿದೆ ಎಂದು ಖರೀದಿ ಕೇಂದ್ರದ ಅಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.