ADVERTISEMENT

ಕೋವಿಡ್ ಲಸಿಕೆ: ಎರಡನೇ ಡೋಸ್‌ ಪಡೆಯಲು ನೂಕುನುಗ್ಗಲು

​ಪ್ರಜಾವಾಣಿ ವಾರ್ತೆ
Published 13 ಮೇ 2021, 6:41 IST
Last Updated 13 ಮೇ 2021, 6:41 IST
ಬಳ್ಳಾರಿಯ ಪಾರ್ವತಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎರಡನೇ ಡೋಸ್ ಲಸಿಕೆ ಪಡೆಯಲು ಅಂತರ ಮರೆತು ನೂಕುನುಗ್ಗಲಿನಲ್ಲಿ ನಿಂತಿರುವ ಸಾರ್ಚಜನಿಕರು...
ಬಳ್ಳಾರಿಯ ಪಾರ್ವತಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎರಡನೇ ಡೋಸ್ ಲಸಿಕೆ ಪಡೆಯಲು ಅಂತರ ಮರೆತು ನೂಕುನುಗ್ಗಲಿನಲ್ಲಿ ನಿಂತಿರುವ ಸಾರ್ಚಜನಿಕರು...   

ಬಳ್ಳಾರಿ: ಜಿಲ್ಲೆಯಲ್ಲಿ ಗುರುವಾರಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆಯಲು ಸಾರ್ವಜನಿಕರ ನೂಕುನುಗ್ಗಲು ಏರ್ಪಟ್ಟಿತ್ತು.

ಜಿಲ್ಲಾಸ್ಪತ್ರೆ, ವಿಮ್ಸ್ ಆಸ್ಪತ್ರೆಯ ಲಸಿಕೆ ಕೇಂದ್ರಗಳು, ತಾಲ್ಲೂಕು ಆಸ್ಪತ್ರೆ, ಆಯ್ದ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬೆಳಿಗ್ಗೆಯಿಂದಲೇ ಜನ ಸಾಲುಗಟ್ಟಿದ್ದರು‌.

ಕೇಂದ್ರಗಳಲ್ಲಿಬೆಳಿಗ್ಗೆ 10.30ರ ವೇಳೆಗೆ ಲಸಿಕೆ ನೀಡುವ‌ ಮುನ್ನ ನೋಂದಣಿ ಕಾರ್ಯ ಶುರುವಾಗುತ್ತಲೇ ಜನರಲ್ಲಿ ಕಾತರ ಶುರುವಾಯಿತು. ನೋಂದಣಿ ಮಾಡಿಕೊಳ್ಳುವವರ ಮುಂದೆ ಜನರ ಏಕಾಏಕಿ ಮುಗಿಬಿದ್ದರು.

ADVERTISEMENT

ಜಿಲ್ಲಾಸ್ಪತ್ರೆ, ವಿಮ್ಸ್ ಆಸ್ಪತ್ರೆಯಲ್ಲಿ ಉದ್ದನೆಯ ಸಾಲಿತ್ತು.

ಬಳ್ಳಾರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎರಡನೇ ಡೋಸ್ ಲಸಿಕೆಗಾಗಿ ಕಾಯುತ್ತಿರುವ ಮಹಿಳೆಯರು

ಕೇವಲ ನೂರು; ಪ್ರತಿ‌ ಕೇಂದ್ರಕ್ಕೆ ಕೇವಲ. 10 ವಯಲ್‌ಗಳನ್ನಷ್ಟೇ ನೀಡಲಾಗಿತ್ತು. ಪ್ರತಿ ವಯಲ್‌ನಲ್ಲಿ 10 ಮಂದಿಗಷ್ಟೇ ಲಸಿಕೆ ನೀಡಲು ಸಾಧ್ಯವಿದ್ದುದರಿಂದ ಬಹಳಷ್ಟು ಮಂದಿ ಲಸಿಕೆ ದೊರಕದೆ ವಾಪಸು ಹೋದರು.

ಮೊದಲನೇ ಡೋಸ್ ಇಲ್ಲ: ಮೊದಲನೇ ಡೋಸ್ ಲಸಿಕೆಪಡೆಯಲು ಬಂದವರನ್ನು‌ ಸಿಬ್ಬಂದಿ ವಾಪಸು ಕಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.