ADVERTISEMENT

ಕೋವಿಡ್‌–19: ವಿದೇಶದಿಂದ ಬಂದ ಎಂಟು ಜನಕ್ಕೆ ಗೃಹಬಂಧನ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 12:26 IST
Last Updated 23 ಮಾರ್ಚ್ 2020, 12:26 IST
   

ಹೊಸಪೇಟೆ: ವಿದೇಶದಿಂದ ಹಿಂತಿರುಗಿರುವ ಎಂಟು ಜನರನ್ನು ಜಿಲ್ಲಾಡಳಿತವು ಗೃಹಬಂಧನದಲ್ಲಿ ಇರಿಸಿದೆ.

ಆಸ್ಟ್ರೇಲಿಯಾ, ದುಬೈ ಹಾಗೂ ಒಮನ್‌ನಿಂದ ತಲಾ ಇಬ್ಬರು ಸಂಡೂರಿಗೆ ಹಿಂತಿರುಗಿದರೆ, ಹಗರಿಬೊಮ್ಮನಹಳ್ಳಿಗೆ ಆಸ್ಟ್ರೇಲಿಯಾ ಹಾಗೂ ದುಬೈನಿಂದ ಕೂಡ್ಲಿಗಿಗೆ ಬಂದಿರುವ ತಲಾ ಒಬ್ಬರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.

ಎರಡು ವಾರ ಮನೆ ಬಿಟ್ಟು ಹೋಗದಂತೆ ಸೂಚಿಸಲಾಗಿದೆ. ಅವರ ಮೇಲೆ ನಿಗಾ ಇಡಲು ತಹಶೀಲ್ದಾರ್‌ಗಳಿಗೆ ನಿರ್ದೇಶನ ನೀಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.