ADVERTISEMENT

15ರಂದು ಸಾಂಸ್ಕೃತಿಕ ಸಮ್ಮಿಲನ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 9:11 IST
Last Updated 13 ಡಿಸೆಂಬರ್ 2019, 9:11 IST

ಹೊಸಪೇಟೆ: ಕರ್ನಾಟಕ ಕಲಾಭಿಮಾನಿ ಸಂಘದ 25ನೇ ವಾರ್ಷಿಕೋತ್ಸವದ ಪ್ರಯುಕ್ತ ಡಿ. 15ರಂದು ನಗರದ ಅಮರಾವತಿ ಪಂಪ ಕಲಾ ಮಂದಿರದಲ್ಲಿ ಸಾಂಸ್ಕೃತಿಕ ಸಮ್ಮಿಲನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಅಂದು ಬೆಳಿಗ್ಗೆ ಹತ್ತರಿಂದ ರಾತ್ರಿ ಎಂಟು ಗಂಟೆಯ ವರೆಗೆ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ 10ಕ್ಕೆ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಉದ್ಘಾಟಿಸುವರು. ನಿವೃತ್ತ ಪ್ರಾಚಾರ್ಯ ಬಿ.ಆರ್‌. ಪೊಲೀಸ್‌ ಪಾಟೀಲ, ‘ಆಕಾಂಕ್ಷಾ’ ವಿಶೇಷ ಮಕ್ಕಳ ಶಾಲೆಯ ಕಾರ್ಯದರ್ಶಿ ಯಶಸ್ವಿನಿ, ಸಂಘದ ಅಧ್ಯಕ್ಷ ಮೋಹನ ಕುಂಟಾರ್‌, ಗೌರವ ಅಧ್ಯಕ್ಷ ದೀಪಕ್‌ ಕುಮಾರ್‌ ಸಿಂಗ್‌ ಉಪಸ್ಥಿತರಿರುವರು.

ಬಳಿಕ ‘ಹಂಪಿ ಅವಲೋಕನ’ ವಿಚಾರ ಸಂಕಿರಣದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಚಲುವರಾಜು, ಎಸ್‌.ವೈ. ಸೋಮಶೇಖರ್‌, ಅಮರೇಶ್‌ ಯತಗಲ್‌ ಮಾತನಾಡುವರು. ನಂತರ ನೃತ್ಯ, ಸಂಗೀತ, ಕಂಸಾಳೆ ಕುಣಿತ, ಭರತನಾಟ್ಯ ಕಾರ್ಯಕ್ರಮಗಳು ಜರುಗಲಿವೆ. ಸಂಜೆ 6.30ಕ್ಕೆ ಶಿವಮೊಗ್ಗದ ಶಾರದಾದೇವಿ ಅಂಧರ ವಿಕಾಸ ಕೇಂದ್ರದ ವಿದ್ಯಾರ್ಥಿಗಳು ಬಡಗುತಿಟ್ಟು ಯಕ್ಷಗಾನ ನಡೆಸಿಕೊಡುವರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.