ADVERTISEMENT

ಬಳ್ಳಾರಿ: ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2025, 16:11 IST
Last Updated 22 ಮಾರ್ಚ್ 2025, 16:11 IST

ಬಳ್ಳಾರಿ:  ನಗರದ 21ನೇ ವಾರ್ಡ್‌ನ ಕೆಇಬಿ ವೃತ್ತದಿಂದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಖ್ಯ ಕಚೇರಿವರೆಗಿನ 350 ಮೀಟರ್ ಉದ್ದದ ರಸ್ತೆ ವಿಸ್ತರಣೆ  ಕಾಮಗಾರಿ 8 ತಿಂಗಳಿಂದ ಕುಂಟುತ್ತಿದ್ದು, ಶೀಘ್ರವೇ ಪೂರ್ಣಗೊಳಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮೇಕಲ ಈಶ್ವರ ರೆಡ್ಡಿ ಆಗ್ರಹಿಸಿದ್ದಾರೆ. 

ಈ ಕುರಿತು ಜಿಲ್ಲಾಧಿಕಾರಿ, ನಗರ ಶಾಸಕ, ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿರುವ ಅವರು, ‘ಎಸ್ಎಚ್ 132 ರಸ್ತೆ ವಿಸ್ತರಣೆ ಆರಂಭವಾಗಿ 8 ತಿಂಗಳ ಮೇಲಾಯಿತು. ಕಾಮಗಾರಿ ಪೂರ್ಣವಾಗಿಲ್ಲ. ರಸ್ತೆ ಪೂರ್ತಿ ಗುಂಡಿಗಳಾಗಿವೆ. ವ್ಯಾಪಾರಸ್ಥರು ಕಂಗಾಲಾಗಿದ್ಗಾರೆ. ಸುತ್ತಲ ಪ್ರದೇಶಕ್ಕೆ ನಿತ್ಯ ದೂಳಿನ ಮಜ್ಜನವಾಗುತ್ತಿದ್ದು, ಜನರಿಗೆ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ’ ಎಂದಿದ್ದಾರೆ. 

‘ಗುತ್ತಿಗೆದಾರರನ್ನು ಈ ವಿಚಾರವಾಗಿ ಪ್ರಶ್ನೆ ಮಾಡಿದರೆ ‘ಹಣ ಬಿಡುಗಡೆಯಾಗಿಲ್ಲ ಹಾಗಾಗಿ ಕಾಮಗಾರಿ ನಿಲ್ಲಿಸಿದ್ದೇವೆ’ ಎನ್ನುತ್ತಾರೆ. ಕಾಮಗಾರಿ ಪೂರ್ಣವಾಗುವ ವರೆಗೆ ಈ ರಸ್ತೆಯಲ್ಲಿ ಭಾರಿ ವಾಹನಗಳು ಸಂಚರಿಸಬಾರದು. ಎರಡೂ ಬದಿಯಲ್ಲಿ ಕಮಾನು ಹಾಕುಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.