ADVERTISEMENT

ವಿನೋಭಾ ಭಾವೆ ಶಾಲೆಯಲ್ಲಿ ಸೌಕರ್ಯಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 11:27 IST
Last Updated 17 ಡಿಸೆಂಬರ್ 2018, 11:27 IST
ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್‌ ಕಾರ್ಯಕರ್ತರು, ಶಾಲಾ ಮಕ್ಕಳು ಸೋಮವಾರ ಹೊಸಪೇಟೆಯ ವಿನೋಭಾ ಭಾವೆ ಶಾಲೆ ಎದುರು ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ
ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್‌ ಕಾರ್ಯಕರ್ತರು, ಶಾಲಾ ಮಕ್ಕಳು ಸೋಮವಾರ ಹೊಸಪೇಟೆಯ ವಿನೋಭಾ ಭಾವೆ ಶಾಲೆ ಎದುರು ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ಇಲ್ಲಿನ ವಿನೋಭಾ ಭಾವೆ ಸರ್ಕಾರಿ ಶಾಲೆಯಲ್ಲಿ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್‌ (ಎಸ್‌.ಎಫ್‌.ಐ.) ಕಾರ್ಯಕರ್ತರು ಸೋಮವಾರ ಶಾಲೆ ಎದುರು ಪ್ರತಿಭಟನೆ ನಡೆಸಿದರು.

ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌.ಡಿ. ಜೋಷಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

‘ಶೌಚಾಲಯವಿಲ್ಲದೇ ವಿದ್ಯಾರ್ಥಿಗಳು ತೀವ್ರ ತೊಂದರೆ ಎದುರಿಸುತ್ತಿದ್ದು, ಅದನ್ನು ನೀಗಿಸಬೇಕು. ಕಂಪ್ಯೂಟರ್‌ ವ್ಯವಸ್ಥೆ ಕಲ್ಪಿಸಿ, ಶಿಕ್ಷಣ ನೀಡಬೇಕು. ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಬೇಕು’ ಎಂದು ಫೆಡರೇಷನ್‌ ತಾಲ್ಲೂಕು ಕಾರ್ಯದರ್ಶಿ ಜೆ. ಶಿವಕುಮಾರ ಆಗ್ರಹಿಸಿದರು.

ADVERTISEMENT

‘ಶಾಲೆಯ ಸುತ್ತಲೂ ನಿರ್ಮಿಸಿದ್ದ ಕಾಂಪೌಂಡ್‌ ಕೆಡವಿದ್ದರಿಂದ ಜನ ಕಸ ಚೆಲ್ಲುತ್ತಿದ್ದಾರೆ. ಕೆಲವರು ಮಲ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಕಾಂಪೌಂಡ್‌ ನಿರ್ಮಿಸಿ ಅದಕ್ಕೆ ಕಡಿವಾಣ ಹೇರಬೇಕು’ ಎಂದು ಒತ್ತಾಯಿಸಿದರು.

ಫೆಡರೇಷನ್‌ನ ಜೆ. ಶಿವು ಹಾಗೂ ಶಾಲೆಯ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.