ADVERTISEMENT

ಧಾರವಾಡಕ್ಕೆ ರೈಲು ಸಂಪರ್ಕ ಕಲ್ಪಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 15:57 IST
Last Updated 11 ಮಾರ್ಚ್ 2023, 15:57 IST
ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಶುಕ್ರವಾರ ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು
ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಶುಕ್ರವಾರ ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ (ವಿಜಯನಗರ): ದಾವಣಗೆರೆ–ಹರಪನಹಳ್ಳಿ–ಹೊಸಪೇಟೆ–ಧಾರವಾಡದ ನಡುವೆ ನೇರ ರೈಲು ಸಂಪರ್ಕ ಕಲ್ಪಿಸಬೇಕೆಂದು ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಆಗ್ರಹಿಸಿದೆ.

ಈ ಸಂಬಂಧ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಸಮಿತಿಯ ಪದಾಧಿಕಾರಿಗಳು ಶುಕ್ರವಾರ ಹುಬ್ಬಳ್ಳಿಯಲ್ಲಿ ಮನವಿ ಸಲ್ಲಿಸಿ ಒತ್ತಾಯಿಸಿದರು. ಸಂಸದ ವೈ.ದೇವೇಂದ್ರಪ್ಪ ಹಾಜರಿದ್ದರು. ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ ಭಾಗದ ಜನರು ವಾಣಿಜ್ಯ ರಾಜಧಾನಿ ಹುಬ್ಬಳ್ಳಿ ಮತ್ತು ಶೈಕ್ಷಣಿಕ ಕೇಂದ್ರ ಧಾರವಾಡಕ್ಕೆ ಹೋಗಲು ನೇರ ರೇಲು ಸಂಪರ್ಕದ ಅಗತ್ಯವಿದೆ. ದಾವಣಗೆರೆ–ಹೊಸಪೇಟೆ ಮಾರ್ಗವಾಗಿ ಪ್ಯಾಸೆಂಜರ್‌ ರೈಲು ಓಡಿಸಬೇಕೆಂದು ಆಗ್ರಹಿಸಿದರು.

ಮುಂಬೈ–ಗದಗ ವಾಡಿ ರೈಲನ್ನು ಬಳ್ಳಾರಿ ವರೆಗೆ ವಿಸ್ತರಿಸಬೇಕು. ಇದರಿಂದ ಮುಂಬೈಗೆ ಸಂಪರ್ಕ ಕಲ್ಪಿಸಿದಂತಾಗುತ್ತದೆ. ಪ್ರವಾಸೋದ್ಯಮ ಬೆಳವಣಿಗೆಗೆ ಅನುಕೂಲವಾಗುತ್ತದೆ. ನಗರದ ರೈಲು ನಿಲ್ದಾಣದಲ್ಲಿ ಪಿಟ್‌ಲೈನ್‌ ನಿರ್ಮಿಸಬೇಕು. ಕೋಡುಗಳ ನಿರ್ವಹಣೆ, ದುರಸ್ತಿ ಕೇಂದ್ರ ಸ್ಥಾಪಿಸಬೇಕು. ಕೊಪ್ಪಳ,ವಿಜಯನಗರ, ಬಳ್ಳಾರಿಯಿಂದ ಬೆಂಗಳೂರಿಗೆ ಹೆಚ್ಚಿನ ಜನ ಪ್ರಯಾಣಿಸುತ್ತಾರೆ. ವಿಜಯಪುರ–ಯಶವಂತಪುರ, ಕಾರಟಗಿ–ಯಶವಂತಪುರ ರೈಲುಗಳಲ್ಲಿ ಹೆಚ್ಚುವರಿ ಸ್ಲೀಪರ್‌, ಸಾಮಾನ್ಯ ದರ್ಜೆ ಬೋಗಿಗಳನ್ನು ಅಳವಡಿಸಬೇಕು. ಹಗರಿಬೊಮ್ಮನಹಳ್ಳಿ ರೈಲು ನಿಲ್ದಾಣ ಮೇಲ್ದರ್ಜೆಗೇರಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ವಿಜಯನಗರ ಜಿಲ್ಲೆ ಧರ್ಮಪರಿಷತ್ ವೇದಿಕೆಯ ನಂದಿಪುರ ಮಹೇಶ್ವರ ಸ್ವಾಮೀಜಿ, ಸಮಿತಿಯ ವೈ. ಯಮನೇಶ್, ಮಹೇಶ ಕುಡಿತಿನಿ, ಅರವಿಂದ ಜಾಲಿ, ಕೊಟ್ರೇಶ ಶೆಟ್ಟರ, ಸತೀಶ ಜೆ. ರೇಣುಕಪ್ಪ, ವಿ. ಗೋವಿಂದಪ್ಪ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.