ADVERTISEMENT

ಸಂಭ್ರಮದ ದಿಂಡಿ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 13:18 IST
Last Updated 22 ನವೆಂಬರ್ 2022, 13:18 IST
ದಿಂಡಿ ಅಂಗವಾಗಿ ಹೊಸಪೇಟೆಯ ವಿಜಯ ವಿಠ್ಠಲ ರುಖುಮಾಯಿ ಮೂರ್ತಿಗಳಿಗೆ ವಿವಿಧ ತರಕಾರಿಗಳಿಂದ ಅಲಂಕರಿಸಿರುವುದು
ದಿಂಡಿ ಅಂಗವಾಗಿ ಹೊಸಪೇಟೆಯ ವಿಜಯ ವಿಠ್ಠಲ ರುಖುಮಾಯಿ ಮೂರ್ತಿಗಳಿಗೆ ವಿವಿಧ ತರಕಾರಿಗಳಿಂದ ಅಲಂಕರಿಸಿರುವುದು   

ಹೊಸಪೇಟೆ (ವಿಜಯನಗರ): ನಗರದ ವಿಜಯ ವಿಠ್ಠಲ ರುಖುಮಾಯಿ ದೇವಸ್ಥಾನದಲ್ಲಿ ಭಾವಸಾರ ಕ್ಷತ್ರಿಯ ಸಮಾಜದಿಂದ ದಿಂಡಿ ಮಹೋತ್ಸವ ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು.

ದಿಂಡಿ ಅಂಗವಾಗಿ ವಿಜಯ ವಿಠ್ಠಲ ರುಖುಮಾಯಿ ಮೂರ್ತಿಗಳಿಗೆ ವಿವಿಧ ತರಕಾರಿಗಳಿಂದ ಅಲಂಕಾರ ಮಾಡಲಾಯಿತು. ಅನಂತರ ಪಾಂಡುರಂಗ ಸಂಗೀತ ಶಾಲೆಯಿಂದ ಗಾಯನ ಕಾರ್ಯಕ್ರಮ ನಡೆಯಿತು. ಏಕಾದಶಿ ಅಂಗವಾಗಿ ಸಂಜೆ ನಗರದ ಪ್ರಮುಖ ಬೀದಿಗಳಲ್ಲಿ ದಿಂಡಿ ಮೆರವಣಿಗೆ ಜರುಗಿತು. ವಾರಕರಿಗಳು, ಸಮಾಜದ ಮುಖಂಡರು ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು. ಬಳಿಕ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ 2023ರ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.

ಸಮಾಜದ ಮುಖಂಡರಾದ ಜಿ.ಪುಂಡಲೀಕರಾವ್, ಹ.ಬ.ಪ.ಕೃಷ್ಣಮೂರ್ತಿರಾವ್ ಫಟಗೆ, ರಾಜು ಸುಲಾಖೆ, ಮಧುಕರರಾವ್ ಸುತ್ರಾವೆ, ಅರುಣಕುಮಾರ್ ಅಚ್ಚಲಕರ್, ಸೋಮನಾಥ್, ವಿನೋದಕುಮಾರ್, ರಾಘವೇಂದ್ರರಾವ್ ಖಮಿತ್ಕರ್, ನವಲೆ, ನಾರಾಯಣರಾವ್, ಹನುಮಂತರಾವ್, ಶ್ರಿನಿವಾಸ್ ರಾವ್ ಇತರರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.