ADVERTISEMENT

’ಬಿಲ್ಡ್‌ಟೆಕ್‌’ ಪ್ರದರ್ಶನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2018, 15:21 IST
Last Updated 20 ಜುಲೈ 2018, 15:21 IST
ಪ್ರದರ್ಶನದಲ್ಲಿ ಇರಿಸಿರುವ ಗೃಹ ನಿರ್ಮಾಣದ ವಸ್ತುಗಳ ಬಗ್ಗೆ ಮಾಹಿತಿ ಪಡೆದ ಯುವತಿಯರು
ಪ್ರದರ್ಶನದಲ್ಲಿ ಇರಿಸಿರುವ ಗೃಹ ನಿರ್ಮಾಣದ ವಸ್ತುಗಳ ಬಗ್ಗೆ ಮಾಹಿತಿ ಪಡೆದ ಯುವತಿಯರು   

ಹೊಸಪೇಟೆ: ಬೆಂಗಳೂರಿನ ಯು.ಎಸ್‌. ಕಮ್ಯುನಿಕೇಷನ್ಸ್‌ನಿಂದ ಇಲ್ಲಿನ ಮುನ್ಸಿಪಲ್‌ ಮೈದಾನದಲ್ಲಿ ಹಮ್ಮಿಕೊಂಡಿರುವ ‘ಬಿಲ್ಡ್‌ಟೆಕ್‌’–2018 ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಪ್ರದರ್ಶನದಲ್ಲಿ ಒಟ್ಟು 100 ಮಳಿಗೆಗಳನ್ನು ತೆರೆಯಲಾಗಿದೆ. ಎಂ. ಸ್ಯಾಂಡ್‌ ಮರಳು, ಗ್ರಾನೈಟ್‌, ಸಿಮೆಂಟ್‌, ಸೋಲಾರ್‌, ಕಿಟಕಿ, ಗಾಜು, ಪೀಠೋಪಕರಣಗಳು, ಅಡುಗೆ ಮನೆಯ ವಸ್ತುಗಳು, ಗೃಹಲಂಕಾರ ವಸ್ತುಗಳು, ಎಲೆಕ್ಟ್ರಿಕ್‌ ಸ್ವಿಚ್, ವೈರ್‌, ಟೈಲ್ಸ್‌ ಸೇರಿದಂತೆ ಇತರೆ ವಸ್ತುಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿದೆ.

‘ಕಡಿಮೆ ಖರ್ಚಿನಲ್ಲಿ ಸುಸಜ್ಜಿತ ಹಾಗೂ ವಿಶಿಷ್ಟ ವಾಸ್ತುಶೈಲಿಯ ಮನೆಯನ್ನು ಯಾವ ರೀತಿ ನಿರ್ಮಿಸಬಹುದು. ಅದಕ್ಕೆ ಎಂತೆಂತಹ ವಸ್ತುಗಳನ್ನು ಉಪಯೋಗಿಸಬೇಕು ಎನ್ನುವುದನ್ನು ತೋರಿಸಿ, ಅದರ ಬಗ್ಗೆ ನುರಿತ ಎಂಜಿನಿಯರ್‌ಗಳು ಸ್ಥಳದಲ್ಲೇ ವಿವರಿಸುತ್ತಾರೆ’ ಎಂದು ಪ್ರದರ್ಶನದ ಸಂಘಟಕ ಎಸ್‌.ಎಂ.ಕೆ. ಉಮಾಪತಿ ಹೇಳಿದರು.

ADVERTISEMENT

ಉಪವಿಭಾಗಾಧಿಕಾರಿ ಗಾರ್ಗಿ ಜೈನ್‌ ಉದ್ಘಾಟಿಸಿ, ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ವಸ್ತುಗಳನ್ನು ವೀಕ್ಷಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಚ್‌.ಎನ್‌. ಗುರುಪ್ರಸಾದ್‌, ಸಿವಿಲ್‌ ಎಂಜಿನಿಯರ್‌ ಮತ್ತು ವಾಸ್ತುಶಿಲ್ಪಿಗಳ ಸಂಘದ ಅಧ್ಯಕ್ಷ ಬಿ. ಶ್ರೀಪಾದ, ಕಲ್ಮೇಶ್‌ ತೋಟದ, ನೇತ್ರಾ ಹೊನವಾಡ್ಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.