ADVERTISEMENT

ಕರ್ತವ್ಯ ಲೋಪ: ಯಡಿಹಳ್ಳಿ ಗ್ರಾ.ಪಂ. ಅಧ್ಯಕ್ಷ ಅಮಾನತು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 4:53 IST
Last Updated 4 ಡಿಸೆಂಬರ್ 2025, 4:53 IST
<div class="paragraphs"><p>ಅಮಾನತು</p></div>

ಅಮಾನತು

   

ಹರಪನಹಳ್ಳಿ: ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ತಾಲ್ಲೂಕಿನ ಯಡಿಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನದಿಂದ ಟಿ.ರಾಮಪ್ಪ ಅವರನ್ನು ಅಮಾನತುಗೊಳಿಸಲಾಗಿದೆ.

ಪಂಚಾಯ್ತಿ ವರ್ಗ 1, 15ನೇ ಹಣಕಾಸು ಯೋಜನೆ, ರಾಜೀವಗಾಂಧಿ ಸಶಕ್ತೀಕರಣ ಅಬಿಯಾನ, ಹಿಂದುಳಿದ ಪ್ರದೇಶಾಭಿವೃದ್ದಿ ಯೋಜನೆಗಳಿಗೆ ಮಾಡಲಾದ ಖರ್ಚು ವೆಚ್ಚಗಳಿಗೆ ಸಂಬಂಧಪಟ್ಟ ಚೆಕ್ ಗಳಿಗೆ ಸಹಿ ಮಾಡಿ ಹಣ ಪಾವತಿಸಿರುವುದು. ಹಾಗೂ ನರೇಗಾ ಯೋಜನೆಯಡಿ ಕೂಲಿಕಾರ್ಮಿಕರಿಗೆ ಸಕಾಲಕ್ಕೆ ಕೂಲಿ ಹಣ ಪಾವತಿಸದೇ, ಎಫ್.ಟಿ.ಒ. ಗಳನ್ನು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳ‌ ಲಾಗಿನ್ ಮೂವ್ ಮಾಡಲು ಕಾರಣೀಭೂತರಾಗಿ ಕರ್ತವ್ಯ ಲೋಪ ಎಸಗಿರುವುದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಧ್ಯಕ್ಷ‌ ಸ್ಥಾನ ಹಾಗೂ ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಿ, ಮುಂದಿನ ಆರು ವರ್ಷಗಳ ವರೆಗೆ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಿ, ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ ಪೀಠಾಧಿಕಾರಿ ಶಿವಕುಮಾರ ಆದೇಶಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.