ADVERTISEMENT

ಬಳ್ಳಾರಿ ಕೋವಿಡ್ ಆಸ್ಪತ್ರೆಯಲ್ಲಿ ಇನ್ನೂ ಎಂಟು ಗರ್ಭಿಣಿಯರು

ಸೋಂಕಿತ ಮಹಿಳೆಯರಿಬ್ಬರಿಗೆ ಹೆರಿಗೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 10:28 IST
Last Updated 25 ಜೂನ್ 2020, 10:28 IST
ಬಳ್ಳಾರಿಯಲ್ಲಿ ಎಂಟು ಗರ್ಭಿಣಿಯರು ದಾಖಲಾಗಿದ್ದು ಇವರಲ್ಲಿ ಇಬ್ಬರಿಗೆ ಹೆರಿಗೆಯಾಗಿದೆ
ಬಳ್ಳಾರಿಯಲ್ಲಿ ಎಂಟು ಗರ್ಭಿಣಿಯರು ದಾಖಲಾಗಿದ್ದು ಇವರಲ್ಲಿ ಇಬ್ಬರಿಗೆ ಹೆರಿಗೆಯಾಗಿದೆ   

ಬಳ್ಳಾರಿ: ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ‌ ಬುಧವಾರ ರಾತ್ರಿ ಮತ್ತು ಗುರುವಾರ ಸೋಂಕಿತ ಮಹಿಳೆಯರಿಬ್ಬರ ಹೆರಿಗೆಯಾಗಿದ್ದು, ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ.

ಆಸ್ಪತ್ರೆಯಲ್ಲಿ ಇನ್ನೂ ಎಂಟು ಸೋಂಕಿತ ಗರ್ಭಿಣಿಯರಿದ್ದು, ಅವರ ಮೇಲೂ ವಿಶೇಷ ನಿಗಾ ವಹಿಸಲಾಗಿದೆ.

ನಗರದ ನೆಹರು ಕಾಲೋನಿಯ 29ವಯಸ್ಸಿನ ಪಿ-6416 ಮಹಿಳೆಗೆ ಗುರುವಾರ ಬೆಳಿಗ್ಗೆ 5ಕ್ಕೆ ನುರಿತ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು, ಮಹಿಳೆಯ ಆರೋಗ್ಯ ಚೆನ್ನಾಗಿದೆ. ಗಂಡು ಮಗು ಹುಟ್ಟಿದ್ದು 2.8ಕೆಜಿ ತೂಕವಿದ್ದು ಆರೋಗ್ಯವಾಗಿದೆ.

ADVERTISEMENT

ಮಹಿಳೆಯ ಪತಿ ಎರಡು ದಿನಗಳ ಹಿಂದೆಯೇ ಕೋವಿಡ್ ನಿಂದ ಗುಣಮುಖರಾಗಿ ಮನೆಗೆ ತೆರಳಿದ್ದರು.ಈ ಮಹಿಳೆಯಲ್ಲಿ ಕೊರೊನಾ ಪಾಸಿಟಿವ್ ಇದ್ದರೂ ಸಹ ಯಾವುದೇ ರೀತಿಯ ಸೋಂಕಿನ ಲಕ್ಷಣಗಳು ಇಲ್ಲ. ಈ ಮಹಿಳೆಗೆ ಇದು ಮೂರನೇ ಮಗು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ತಿಳಿಸಿದ್ದಾರೆ.

ಬುಧವಾರ ರಾತ್ರಿ ರಾಯದುರ್ಗದ 28ವಯಸ್ಸಿನ ಪಿ-7094 ಯುವತಿಯ ಸಾಮಾನ್ಯ ಹೆರಿಯಾಗಿದ್ದು, ತಾಯಿ ಆರೋಗ್ಯವಾಗಿದ್ದಾಳೆ. ಗಂಡು ಮಗು ಹುಟ್ಟಿದ್ದು,3.2ಕೆಜಿ ತೂಕವಿದೆ.

ಈ ಮಹಿಳೆಗೂ ಸಹ ಇದು ಮೂರನೇ ಮಗು.

ಅವರ ಪತಿಯಿಂದ ಈ ಮಹಿಳೆಗೆ ಸೋಂಕು ಹರಡಿದ ಹಿನ್ನೆಲೆಯಿದ್ದು, ಅವರು ಸಹ ಕೆಲದಿನಗಳ ಹಿಂದೆ ಗುಣಮುಖರಾಗಿದ್ದಾರೆ. ಮಕ್ಕಳ ಆರೋಗ್ಯ ನೋಡಿಕೊಂಡು ಗಂಟಲು ದ್ರವದ ಪರೀಕ್ಷೆ ಮಾಡಿಸುವುದಕ್ಕೆ ಸಂಬಂಧಿಸಿ ಸಮಿತಿ ನಿರ್ಣಯದ ಅನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ಎನ್.ಬಸರೆಡ್ಡಿ ತಿಳಿಸಿದ್ದಾರೆ.

ತಜ್ಞ ವೈದ್ಯರಾದ ಡಾ.ಸುಯಗ್ನ ಜೋಶಿ, ಡಾ.ವಿಜಯಲಕ್ಷ್ಮಿ, ಡಾ.ಸರಸ್ವತಿ, ಡಾ.ರಾಜೇಶ್ವರಿ, ಡಾ.ಮಲ್ಲಣ್ಣ, ಡಾ.ಸತೀಶ್, ಡಾ.ಭಾಸ್ಕರ್, ಡಾ.ನಿತೀಶ್, ಡಾ.ವೀರಶಂಕರ್, ಡಾ.ಸುನೀಲ್, ಡಾ.ಜಯಲಕ್ಷ್ಮಿ , ಡಾ.ಸಂಪತ್‌ ಹೆರಿಗೆ ಕಾರ್ಯದಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.