ADVERTISEMENT

ವಿಕಾಸ ಸೌಹಾರ್ದ ಕೋ ಆಪರೇಟಿವ್‌ ಬ್ಯಾಂಕ್‌: ₹2,346ಕ್ಕೆ ₹3 ಲಕ್ಷ ಆರೋಗ್ಯ ವಿಮೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 10:26 IST
Last Updated 24 ಜುಲೈ 2020, 10:26 IST

ಹೊಸಪೇಟೆ: ವಿಕಾಸ ಸೌಹಾರ್ದ ಕೋ ಆಪರೇಟಿವ್‌ ಬ್ಯಾಂಕ್‌ನಿಂದ ‘ವಿಕಾಸ ಆರೋಗ್ಯ ಬಂಧು’ ಗುಂಪು ಆರೋಗ್ಯ ವಿಮೆ ಯೋಜನೆ ಪರಿಚಯಿಸಲಾಗಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ಮನವಿ ಮಾಡಿದ್ದಾರೆ.

‘ಇಫ್ಕೊ ಟೋಕಿಯೊ ವಿಮಾ ಸಂಸ್ಥೆಯ ಸಹಯೋಗದಲ್ಲಿ ವಿಮೆ ಯೋಜನೆ ಆರಂಭಿಸಲಾಗುತ್ತಿದೆ. ಕೋವಿಡ್‌ ಸೇರಿದಂತೆ ಎಲ್ಲ ಕಾಯಿಲೆಗಳಿಗೂ ಈ ವಿಮೆ ಅನ್ವಯಿಸುವಂತೆ ತಕ್ಷಣದಿಂದಲೇ ಜಾರಿಗೆ ತರಲಾಗಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

‘ಈ ಯೋಜನೆಯ ಲಾಭ ಪಡೆಯಬೇಕು ಎನ್ನುವವರು 18 ರಿಂದ 65 ವರ್ಷ ಒಳಗಿನವರಾಗಿರಬೇಕು. ವಾರ್ಷಿಕ ₹2,346 ಸಂದಾಯ ಮಾಡಿದರೆ ₹3 ಲಕ್ಷ ವಿಮೆ ಪ್ರಯೋಜನ ಪಡೆಯಬಹುದು. ಹಾಲಿ ಗ್ರಾಹಕರು ತಕ್ಷಣದಿಂದಲೇ ವಿಮೆ ಮಾಡಿಸಿಕೊಳ್ಳಬಹುದು. ಹೊಸ ಗ್ರಾಹಕರು ಬ್ಯಾಂಕಿನಲ್ಲಿ ಖಾತೆ ತೆರೆದ 15 ದಿನಗಳ ಬಳಿಕ ವಿಮೆ ಮಾಡಿಸಬಹುದು’ ಎಂದು ವಿವರಿಸಿದರು.

ADVERTISEMENT

‘ಕೊರೊನಾ ಕವಚ’, ವೈಯಕ್ತಿಕ ವಿಮೆ, ಜೀವ ವಿಮೆ, ವ್ಯಾಪಾರ ವಿಮೆ ಹಾಗೂ ವಾಹನ ವಿಮೆ ಸೌಲಭ್ಯ ಬ್ಯಾಂಕಿನಲ್ಲಿ ಲಭ್ಯ ಇವೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.