ಕೂಡ್ಲಿಗಿ: ಪಟ್ಟಣದ ವಿನಾಯಕ ಸ್ಟೀಲ್ಸ್‌ನ ಹೊಲ್‌ಸೇಲ್ ಕಬ್ಬಿಣ ಅಂಗಡಿಯಲ್ಲಿ ಜೆಎಸ್‌ಡಬ್ಲೂ ಮುದ್ರೆವುಳ್ಳ ನಕಲಿ ಕಬ್ಬಿಣದ ಸೀಟ್‌ಗಳನ್ನು ಮಾರಾಟ ಮಾಡುತ್ತಿರುವ ಆರೋಪದ ಮೇಲೆ ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಚಿತ ಮಾಹಿತಿ ಮೇರೆಗೆ ಜೆಎಸ್‌ಡಬ್ಲೂ ಕಂಪನಿಯ ಆಪರೇಷನ್, ಇನ್ವೆಸ್ಟಿಗೇಷನ್ ಮತ್ತು ರಿಸರ್ಚ್ ವಿಭಾಗದ ವ್ಯವಸ್ಥಾಪಕ, ವಿನಾಯಕ ಸ್ಟೀಲ್ಸ್ ಅಂಗಡಿಯಲ್ಲಿ ಜೆಎಸ್‌ಡಬ್ಲೂ ಮುದ್ರೆವುಳ್ಳ ಕಬ್ಬಿಣದ ಸೀಟ್‌ಗಳನ್ನು ಖರೀದಿ ಮಾಡಿ ಪರಿಶೀಲಿಸಿದಾಗ ಅವು ನಕಲಿ ಎಂದು ತಿಳಿದು ಬಂದಿದೆ. ಇದರಿಂದ ವಿನಾಯಕ ಸ್ಟೀಲ್ಸ್‌ನ ಅಂಗಡಿ ವಿರುದ್ದ ಕಾಪಿರೈಟ್ ಕಾಯ್ದೆಯಂತೆ ಕ್ರಮ ಕೈಗೊಳ್ಳುವಂತೆ ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.