
ತೆಕ್ಕಲಕೋಟೆ: ಬಳ್ಳಾರಿ ಗಡಿಯ ಸೀಮಾಂಧ್ರದ ಬೊಮ್ಮನ ಹಾಳ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾದ ಇಬ್ಬರು ಬಾಲಕಿಯರಲ್ಲಿ ಒಬ್ಬ ಬಾಲಕಿ ಶವವಾಗಿ ಪತ್ತೆಯಾದ ಘಟನೆ ಮಂಗಳವಾರ ನಡೆದಿದೆ.
ಬೊಮ್ಮನ ಹಾಳ್ ಬಳಿಯ ನೇಮಕಲ್ ಗ್ರಾಮದ ನಿವಾಸಿ ಕಲ್ಲಪ್ಪ 5 ಮತ್ತು 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ತನ್ನ ಇಬ್ಬರು ಹೆಣ್ಣು ಮಕ್ಕಳ ಜತೆಗೆ ಭಾನುವಾರ ಊರಿಗೆ ಹೋಗೋಣ ಎಂದು ಕರೆದುಕೊಂಡು ಹೋಗಿದ್ದಾರೆ.
ಕಲ್ಲಪ್ಪ ಒಬ್ಬನೇ ಊರಿಗೆ ಮರಳಿದ್ದು ಮಕ್ಕಳ ಬಗ್ಗೆ ಸರಿಯಾಗಿ ಮಾಹಿತಿ ನೀಡಿಲ್ಲ. ಅನುಮಾನಗೊಂಡ ಮನೆಯವರು ವಿಚಾರಿಸಿ ಠಾಣೆಗೆ ದೂರು ನೀಡಿದ್ದಾರೆ.
ಹಿರಿಯ ಮಗಳು ಅನಸೂಯ (12) ಹಾಗೂ ಸಿಂಧು (12) ಎಂದು ಗುರುತಿಸಿಲಾಗಿದೆ. ಮಂಗಳವಾರ ಸಿರಿಗೇರಿ ಕ್ರಾಸ್ ಬಳಿಯ ತುಂಗಭದ್ರಾ ಬಲದಂಡೆ ಕಾಲುವೆ (ಎಲ್ ಎಲ್ ಸಿ) ಯಲ್ಲಿ ಮಂಗಳವಾರ ಅನಸೂಯ ಶವವಾಗಿ ಪತ್ತೆಯಾಗಿದ್ದು, ಮತ್ತೊಬ್ಬ ಬಾಲಕಿಯ ಪತ್ತೆಗಾಗಿ ಸೀಮಾಂದ್ರದ ಪೊಲೀಸಲು ಶೋಧಕಾರ್ಯ ನಡೆದಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.