ADVERTISEMENT

ಹೂವಿನಹಡಗಲಿ | ಶಿಶುನಾಳ ಷರೀಫಗಿರಿ ಮಠಕ್ಕೆ ಬೆಂಕಿ : ಅಪಾರ ಹಾನಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 16:21 IST
Last Updated 21 ಫೆಬ್ರುವರಿ 2024, 16:21 IST
ಹೂವಿನಹಡಗಲಿ ತಾಲ್ಲೂಕು ಕೊಂಬಳಿ ಸಮೀಪದ ಷರೀಫಗಿರಿ ಮಠಕ್ಕೆ ಬೆಂಕಿ ಬಿದ್ದು ಸುಟ್ಟಿರುವುದು
ಹೂವಿನಹಡಗಲಿ ತಾಲ್ಲೂಕು ಕೊಂಬಳಿ ಸಮೀಪದ ಷರೀಫಗಿರಿ ಮಠಕ್ಕೆ ಬೆಂಕಿ ಬಿದ್ದು ಸುಟ್ಟಿರುವುದು   

ಹೂವಿನಹಡಗಲಿ: ತಾಲ್ಲೂಕಿನ ಕೊಂಬಳಿ ಹೊರ ವಲಯದಲ್ಲಿರುವ ಸಂತ ಶಿಶುನಾಳ ಷರೀಫರ ಮಠಕ್ಕೆ ಬುಧವಾರ ಮಧ್ಯಹ್ನ ಆಕಸ್ಮಿಕ ಬೆಂಕಿ ತಗುಲಿ, ಮಠ ಸಂಪೂರ್ಣ ಸುಟ್ಟು ಹೋಗಿದೆ.

ತಡಗಿನ ಶೀಟ್, ತೆಂಗಿನ ಗರಿಗಳಿಂದ ನಿರ್ಮಿಸಿದ್ದ ತಾತ್ಕಲಿಕ ಮಠಕ್ಕೆ ಬೆಂಕಿ ತಗುಲಿದ್ದು, ಮಠದ ಜೀರ್ಣೋದ್ಧಾರಕ್ಕಾಗಿ ಸಂಗ್ರಹಿಸಿದ್ದ ₹3 ಲಕ್ಷ, ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ.

ಅಕ್ಕಪಕ್ಕದ ಹೊಲಗಳ ರೈತರು, ಭಕ್ತರು ಸ್ಥಳಕ್ಕೆ ಬರುವಷ್ಟರಲ್ಲಿ ಬೆಂಕಿಯ ಜ್ವಾಲೆ ಇಡೀ ಮಠವನ್ನು ಆವರಿಸಿತ್ತು. ಹೂವಿನಹಡಗಲಿ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.