ADVERTISEMENT

‘ನೆರೆ ಹಾವಳಿಯಿಂದ ಸಚಿವ ಸಂಪುಟ ರಚನೆ ವಿಳಂಬ’

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 10:13 IST
Last Updated 13 ಆಗಸ್ಟ್ 2019, 10:13 IST
ಬಳ್ಳಾರಿಯ ಕಿತ್ತೂರುರಾಣಿ ಚೆನ್ನಪ್ಪ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಶಾಸಕ ಜಿ.ಸೋಮಶೇಖರ ರೆಡ್ಡಿ  ಸಸಿ ನೆಟ್ಟರು.
ಬಳ್ಳಾರಿಯ ಕಿತ್ತೂರುರಾಣಿ ಚೆನ್ನಪ್ಪ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಶಾಸಕ ಜಿ.ಸೋಮಶೇಖರ ರೆಡ್ಡಿ  ಸಸಿ ನೆಟ್ಟರು.   

ಬಳ್ಳಾರಿ: ‘ನೆರೆ ಹಾವಳಿಯಿಂದಾಗಿ, ಸಚಿವ ಸಂಪುಟ ರಚನೆಯು ವಿಳಂಬವಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಸಂಪುಟ ರಚನೆಯಾಗುವ ನಿರೀಕ್ಷೆ ಇದೆ’ ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ಅಭಿಪ್ರಾಯಪಟ್ಟರು.

ನಗರ ಕಿತ್ತೂರುರಾಣಿ ಚೆನ್ನಪ್ಪ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಸಸಿ ನೆಟ್ಟು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ನೆರೆ ಸಂತ್ರಸ್ತ ಗ್ರಾಮಗಳಿಗೆ ನಿರಂತರ ಭೇಟಿ ನೀಡುತ್ತಿದ್ದಾರೆ. ಸಂತ್ರಸ್ತರಿಗೆ ಸ್ಪಂದಿಸದೇ ಸಚಿವ ಸಂಪುಟ ರಚಿಸಿದರೆ ಜನರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದ್ದುದರಿಂದ ಸಂಪುರ ರಚಿಸಿಲ್ಲ’ ಎಂದು ಪ್ರತಿಪಾದಿಸಿದರು.

‘ನಾನಂತೂ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಆದರೆ ಆ ದೇವರು ಕೃಪೆದೋರಿ ಸ್ಥಾನ ಸಿಕ್ಕರೆ ನಿಭಾಯಿಸುವೆ.ಆಗಸ್ಟ್‌18ರಂದು ಸಂಪುಟ ರಚನೆಯಾಗುವ ಕುರಿತು ಮಾಹಿತಿ ದೊರಕಿದೆ’ ಎಂದರು.

ADVERTISEMENT

‘ಕರುಣಾಕರರೆಡ್ಡಿ ನನ್ನ ಸಹೋದರ. ಕೌಟುಂಬಿಕ ಕಾರಣಗಳಿಗಾಗಿ ದೂರ ಇದ್ದೆವು. ಈಗ ಒಟ್ಟಿಗೇ ಇದ್ದೇವೆ. ಯಾವ ಭಿನ್ನಾಭಿಪ್ರಾಯವೂ ಇಲ್ಲ. ಅವರಿಗೆ, ಬಿ.ಶ್ರೀರಾಮುಲು ಅವರಿಗೆ ಸಚಿವ ಸ್ಥಾನದ ದೊರಕಿದರೂ ಸಂತೋಷವೇ’ ಎಂದರು.

ಶಾಲೆಗೆ ಸಸಿಗಳನ್ನು ನೀಡಿದ ವೈದ್ಯ ಡಾ.ತಿಪ್ಪಾರೆಡ್ಡಿ, ವೀರಶೈವ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಚೋರನೂರು ಕೊಟ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.