ಹಣ ವಂಚನೆ (ಪ್ರಾತಿನಿಧಿಕ ಚಿತ್ರ)
ಬಳ್ಳಾರಿ: ನಗರದ ‘ಬಳ್ಳಾರಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ’ಯ ವೈದ್ಯರೊಬ್ಬರಿಗೆ ಪೊಲೀಸರ ಹೆಸರಿನಲ್ಲಿ ಬೆದರಿಸಿ, ₹12 ಲಕ್ಷ ಪಡೆದು ವಂಚನೆ ಮಾಡಲಾಗಿದೆ.
ಸೆ. 18ರಂದು ವೈದ್ಯರಿಗೆ ಕರೆ ಮಾಡಿದ್ದ ವಂಚಕರು, ‘ನಿಮ್ಮ ಹೆಸರಿನಲ್ಲಿ ‘ಫೆಡೆಕ್ಸ್ ಕೊರಿಯರ್’ ನಲ್ಲಿ ಮಾದಕದ್ರವ್ಯ ಸಾಗಾಣಿಕೆ ಮಾಡಲಾಗುತ್ತಿದೆ. ಹಣ ಅಕ್ರಮ ವರ್ಗಾವಣೆ ಹಿನ್ನೆಲೆಯಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ₹10,00,000 ಹಣವನ್ನು ನಾವು ತಿಳಿಸಿದ ಖಾತೆಯಲ್ಲಿ ಜಮೆ ಮಾಡಬೇಕು. ನೀವು ಯಾವಾಗ ಬರಬೇಕೆಂದು ನಂತರ ತಿಳಿಸುತ್ತೇವೆ. ಪ್ರಾಥಮಿಕ ವಿಚಾರಣೆ ಮಾಡಿದ ನಂತರ ನಿಮ್ಮದೇನು ತಪ್ಪಿಲ್ಲದಿದ್ದಲ್ಲಿ ನಿಮ್ಮ ಹಣವನ್ನು ನಿಮಗೆ ಹಿಂದಿರುಗಿಸುತ್ತೇವೆ ಎಂದು ಹೇಳಿದ್ದರಿಂದ ಎರಡು ಕಂತುಗಳಲ್ಲಿ ₹12,00,094.40 ಪಾವತಿಸಲಾಗಿದೆ‘ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವೈದ್ಯ ನೀಡಿದ ದೂರಿನ ಮೇರೆಗೆ ನಗರದ ಸಿಇಎನ್ ಠಾಣೆ ಪೊಲೀಸರು ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.