ADVERTISEMENT

ತೆಕ್ಕಲಕೋಟೆ | ಗಣೇಶ, ಈದ್ ಮಿಲಾದ್: ಸಿಸಿಟಿವಿ ಕ್ಯಾಮೆರಾ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2024, 15:50 IST
Last Updated 9 ಸೆಪ್ಟೆಂಬರ್ 2024, 15:50 IST
ಸಿಸಿಟಿವಿ ಕ್ಯಾಮೆರಾ (ಸಾಂದರ್ಭಿಕ ಚಿತ್ರ)
ಸಿಸಿಟಿವಿ ಕ್ಯಾಮೆರಾ (ಸಾಂದರ್ಭಿಕ ಚಿತ್ರ)   

ತೆಕ್ಕಲಕೋಟೆ: ಗಣೇಶ, ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧೆಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಸಿಪಿಐ ಸುಂದರೇಶ್ ಹೊಳೆಣ್ಣವರ ತಿಳಿಸಿದ್ದಾರೆ.

ಪಟ್ಟಣ ಪಂಚಾಯಿತಿ ವತಿಯಿಂದ ರಾಷ್ಟ್ರೀಯ ಹೆದ್ದಾರಿಯ ಮಯೂರ ವೃತ್ತ, ಮಾಯಮ್ಮ ದೇವಸ್ಥಾನ ಮುಖ್ಯರಸ್ತೆ, ನಾಡಕಚೇರಿ ಮುಂಭಾಗ, ಮಣಿಗೇರಿ ಮಸೀದಿ, ಕಾಡಸಿದ್ಧೇಶ್ವರ ದೇವಸ್ಥಾನ, ಬಳ್ಳಾರಿ ಮಸೀದಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಒಟ್ಟು 11 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಮುಖ್ಯಾಧಿಕಾರಿ ಪರಿಶುರಾಮ ತಿಳಿಸಿದರು.

ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 70 ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಪರವಾನಗಿ ನೀಡಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.