ಕಂಪ್ಲಿ: ಪಟ್ಟಣ ವ್ಯಾಪ್ತಿಯಲ್ಲಿ 63, ಗ್ರಾಮೀಣ ಪ್ರದೇಶದಲ್ಲಿ 72 ಸೇರಿ ಒಟ್ಟು 135 ಕಡೆಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
ಅಂಬೇಡ್ಕರ್ ವೃತ್ತದ ಬಳಿಯ ಲಯನ್ಸ್ ಕ್ಲಬ್‌ನ ಗರುಡ ವಾಹನ ಗಣೇಶ, ಭಗತ್‍ಸಿಂಗ್ ಬಾಯ್ಸ್‌ನ ಭಜರಂಗಿ ಗಣೇಶ, ಹಿಂದೂ ಸಾಮ್ರಾಟ್ ಗಣಪತಿ ಮಂಡಳಿಯ ನಂದಿ ವಾಹನ ಗಣೇಶ, ಫ್ರೆಶ್‍ಗ್ರೂಪ್ ಕಂಪ್ಲಿಯ ಸಾಮ್ರಾಟ ಗಣೇಶ, ಸಿದ್ಧಿ ವಿನಾಯಕ ಉತ್ಸವ ಸಮಿತಿಯ ನಟರಾಜ ಭಂಗಿ ಗಣೇಶ ಹಾಗೂ ಸರಾಫ್ ವರ್ತಕರ ಹಾಗೂ ಕೆಲಸಗಾರರ ಸಂಘದ ಗಣೇಶ ಮೂರ್ತಿ ಮನಸೂರೆಗೊಂಡವು.
ಜೆ.ಬಿ ಕಿಂಗ್ಸ್ ಮತ್ತು ಭೀಮ ಆರ್ಮಿ ಪ್ರತಿಷ್ಠಾಪಿಸಿದ ಭೀಮ ಕೋರೆಗಾಂವ್ ಸಿದ್ಧನಾಥ ರೂಪದ ಗಣೇಶ, ವರಸಿದ್ದಿ ವಿನಾಯಕ ಯುವಕರ ಸಂಘದ ಗುರುರಾಘವೇಂದ್ರ ರೂಪದ ಗಣೇಶ ಮೂರ್ತಿ ಆಕರ್ಷಕವಾಗಿದ್ದವು.
ಪುರಸಭೆಯು ಸೋಮಪ್ಪ ಕೆರೆ ದಡದಲ್ಲಿ 10 ಅಡಿ ಅಗಲ, 10 ಉದ್ದದ ಗುಂಡಿ ತೆಗೆದು ನೀರು ತುಂಬಿಸಿದ್ದು, ಗಣೇಶ ಮೂರ್ತಿಗಳ ವಿಸರ್ಜನೆಗೆ ವ್ಯವಸ್ಥೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.