ADVERTISEMENT

ಇಳುವರಿ ಹೆಚ್ಚಿಸುವ ಹಸಿರೆಲೆ ಗೊಬ್ಬರ

​ಪ್ರಜಾವಾಣಿ ವಾರ್ತೆ
Published 30 ಜೂನ್ 2023, 15:44 IST
Last Updated 30 ಜೂನ್ 2023, 15:44 IST

ತೋರಣಗಲ್ಲು: ‘ಮಣ್ಣಿನ ಗುಣಧರ್ಮ, ವಿವಿಧ ಬೆಳೆಗಳ ಇಳುವರಿ ಹಾಗೂ ಪೋಷಕಾಂಶ ಹೆಚ್ಚಿಸಲು ಹಸಿರೆಲೆ ಗೊಬ್ಬರವು ಗ್ರಾಮೀಣ ಪ್ರದೇಶದ ರೈತರಿಗೆ ಬಹಳ ಸಹಕಾರಿಯಾಗಿದೆ’ ಎಂದು ಬಳ್ಳಾರಿ ಜಿಲ್ಲಾ ಕೃಷಿ ಇಲಾಖೆ ಉಪ ಕೃಷಿ ನಿರ್ದೇಶಕ ಕೆಂಗೇಗೌಡ ಹೇಳಿದರು.

ಸಮೀಪದ ಹಳೆಮಾದಾಪುರ ಗ್ರಾಮದಲ್ಲಿ ಸಂಡೂರು ತಾಲ್ಲೂಕು ಕೃಷಿ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹಸಿರೆಲೆ ಗೊಬ್ಬರ ಪ್ರಾತ್ಯಕ್ಷಿಕೆ ಹಾಗೂ ಬೀಜೋಪಚಾರ ಕಾರ್ಯಕ್ರಮಕ್ಕೆ ಚಾಲನೆ ಅವರು ಮಾತನಾಡಿದರು.

‘ಬೀಜೋಪಾರದಿಂದ ಭತ್ತದ ಸಸಿಗಳಿಗೆ ರೋಗ ಬರುವುದಿಲ್ಲ, ಸಸಿಗಳ ತುದಿ ಒಣಗುವುದಿಲ್ಲ, ರೋಗ ನಿಯಂತ್ರಣದಲ್ಲಿಡಲು ಹಾಗೂ ಸಮೃದ್ಧವಾಗಿ ಬೆಳೆ ಬೆಳೆಯಲು ಈ ವಿಧಾನವು ಬಹಳ ಅವಶ್ಯಕವಾಗಿದೆ’ ಎಂದರು.

ADVERTISEMENT

‘ತೋರಣಗಲ್ಲು ಹೋಬಳಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಸುಮಾರು 500 ಎಕರೆಯಲ್ಲಿ ಹಸಿರೆಲೆ ಗೊಬ್ಬರ ಬೆಳೆಯಲಾಗಿದೆ. ಕೊಟ್ಟಿಗೆ ಗೊಬ್ಬರ ವಿರಳವಾಗಿರುವುದರಿಂದ ಅದಕ್ಕೆ ಪರ್ಯಾಯವಾಗಿ ಈ ಹಸಿರೆಲೆ ಗೊಬ್ಬರವು ರೈತರಿಗೆ ವರದಾನವಾಗಿದೆ’ ಎಂದು ಸಂಡೂರು ತಾಲ್ಲೂಕಿನ ಸಹಾಯಕ ಕೃಷಿ ಅಧಿಕಾರಿ ಮಂಜುನಾಥ ಹೇಳಿದರು.

ತೋರಣಗಲ್ಲು ಹೋಬಳಿಯ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಐ.ಜ್ಯೋತಿ, ವಿವಿಧ ಗ್ರಾಮಗಳ ರೈತರಾದ ಮಾರೆಪ್ಪ, ನಾಗರಾಜ್, ವಲಿಬಾಷಾ, ನರಸಿಂಹ, ರಾಮು, ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.