ADVERTISEMENT

ಹರಪನಹಳ್ಳಿ | ಹಸಿರೀಕರಣಕ್ಕೆ 9 ಲಕ್ಷ ಸಸಿ ಸಿದ್ಧ

ವಿತರಣೆಗೆ ಸಜ್ಜಾದ ಅರಣ್ಯ ಇಲಾಖೆಯಿಂದ ಗಿಡಗಳ ಪೋಷಣೆ

​ಪ್ರಜಾವಾಣಿ ವಾರ್ತೆ
Published 19 ಮೇ 2020, 20:00 IST
Last Updated 19 ಮೇ 2020, 20:00 IST
ಹರಪನಹಳ್ಳಿ ತಾಲ್ಲೂಕಿನ ಕಣಿವಿಹಳ್ಳಿ ನರ್ಸರಿಯಲ್ಲಿ ಬೆಳೆಸಿರುವ ವಿವಿಧ ಜಾತಿಯ ಸಸಿಗಳು
ಹರಪನಹಳ್ಳಿ ತಾಲ್ಲೂಕಿನ ಕಣಿವಿಹಳ್ಳಿ ನರ್ಸರಿಯಲ್ಲಿ ಬೆಳೆಸಿರುವ ವಿವಿಧ ಜಾತಿಯ ಸಸಿಗಳು   

ಹರಪನಹಳ್ಳಿ: ತಾಲ್ಲೂಕಿನ ಹಸಿರೀಕರಣಕ್ಕೆ ಸಿದ್ಧತೆ ನಡೆಸಿರುವಅರಣ್ಯ ಇಲಾಖೆ ರೈತರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ವಿತರಣೆ ಮಾಡಲು ವಿವಿಧ ಬಗೆಯ 9 ಲಕ್ಷ ಸಸಿಗಳನ್ನು ಬೆಳೆಸಿದೆ.

ಕಳೆದ ವಾರದಿಂದ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದೆ. ಏರುತ್ತಿದ್ದ ತಾಪಮಾನದಿಂದ ಬಿಸಿಯಾಗಿದ್ದ ಭೂಮಿ ತಂಪಾಗುತ್ತಿದೆ. ಹಾಗಾಗಿ ಸಸಿಗಳ ವಿತರಣೆ ಮತ್ತು ಅರಣ್ಯ ಸಂಪತ್ತು ಹೆಚ್ಚಿಸಲು ಇಲಾಖೆ ಭರದ ಸಿದ್ಧತೆ ಕೈಗೊಂಡಿದೆ.

ಪ್ರಾದೇಶಿಕ ಅರಣ್ಯ ವಿಭಾಗದಿಂದ ಕಣಿವಿಹಳ್ಳಿ ನರ್ಸರಿಯಲ್ಲಿ 7 ಲಕ್ಷ ಸಸಿಗಳು, ಸಾಮಾಜಿಕ ಅರಣ್ಯ ವಿಭಾಗದಿಂದ ದ್ಯಾಪ
ನಾಯಕನಹಳ್ಳಿ ನರ್ಸರಿಯಲ್ಲಿ 2 ಲಕ್ಷ ಸಸಿಗಳನ್ನು ಪೋಷಿಸಲಾಗುತ್ತಿದೆ. ವಿವಿಧೆಡೆ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಭೂಮಿಯಲ್ಲಿ ತೇವಾಂಶ ಹೆಚ್ಚಳವಾಗಿದೆ. ಮೇ ತಿಂಗಳ ಅಂತ್ಯಕ್ಕೆ ಸಸಿಗಳ ನಾಟಿ ಮತ್ತು ವಿತರಣೆಗೆ ಇಲಾಖೆಗಳು ಸಿದ್ಧತೆ ಆರಂಭಿಸಿವೆ. ಇಲಾಖೆಯ ಎಲ್ಲ ಹಂತದ ಸಿಬ್ಬಂದಿ, ಅಧಿಕಾರಿಗಳ ಸಸಿಗಳ ಪೋಷಣೆಗೆ ವೇಳಾಪಟ್ಟಿ ತಯಾರಿಸಿ ಸರದಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ADVERTISEMENT

ಮಲೆನಾಡಿನ ಅನುಭವ ನೀಡುವ ಕಣಿವಿಹಳ್ಳಿ ನರ್ಸರಿಯಲ್ಲಿ ಬೇವು– 5,990 ಸಸಿ, ಹೊಂಗೆ 10,7312, ತಪಸಿ-15,906. ಕಮರ-1,92,278, ಬಸರಿ-5,431, ಅರಳಿ-796, ಆಲ-530, ನೇರಳೆ-5,717, ಅತ್ತಿ-6,366, ಸೀತಾಫಲ-41,376, ಸಿಮಾರೂಬ-45,000, ಬಸವನಪಾದ-1,984, ಶ್ರೀಗಂಧ-25,032, ಹುಣಸೆ-9,394, ಸಿಹಿ ಹುಣಸೆ-256, ಗೋಣಿ-755, ಸೋಮೆ-3,000, ಬೆಳವಲು-1,728, ಬಾದಾಮಿ-992, ನೆಲ್ಲಿ-11,397, ರಕ್ತಚಂದನ-10,500, ಹೊಳೆಮತ್ತಿ-5,428, ಕಕ್ಕೆ-2,576, ಬಿದಿರು-4,072, ಕರಿಬೇವು-1,676, ತಾರೆ-2,276, ಉದಯ-1,56,020, ಮುತ್ತುಗ-6,000, ಅಂಟವಾಳ-8,550, ಬೀಟೆ-9,344, ನಿಂಬೆ-1,000 ಮತ್ತು ಸಂಪಿಗೆ-3,000 ಸಸಿ ಒಳಗೊಂಡು ಒಟ್ಟು, 7,00,588 ಸಸಿಗಳನ್ನು ಬೆಳೆಸಲಾಗಿದೆ ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ಡಿ.ಭರತ್.

ಕಣಿವಿಹಳ್ಳಿ ನರ್ಸರಿಗೆ ಒಬ್ಬ ಸಹಾಯಕ ವಲಯ ಅರಣ್ಯಾಧಿಕಾರಿಯನ್ನು ನೇಮಿಸಲಾಗಿದೆ. ಇಲ್ಲಿ ತಯಾರಾದ ಸಸಿಗಳನ್ನು ಮೇ ಅಂತ್ಯಕ್ಕೆ ಚೆಕ್‍ ಲೀಸ್ಟ್‌ ತಯಾರಿಸಲಾಗುವುದು ಎಂದು
ಅವರು ತಿಳಿಸಿದರು.

ಸಾಮಾಜಿಕ ಅರಣ್ಯ ವಿಭಾಗವು ವಿವಿಧ ಜಾತಿಯ 2 ಲಕ್ಷ ಸಸಿಗಳನ್ನು ಪಾಲನೆ ಮಾಡುತ್ತಿದೆ. ಜೂನ್ ಮೊದಲ ವಾರದಲ್ಲಿ ಸಸಿಗಳನ್ನು ವಿತರಿಸಲಾಗುವುದು ಎಂದು ಸಾಮಾಜಿಕ ಅರಣ್ಯಾಧಿಕಾರಿ ಕಾಂತೇಶ್ ತಿಳಿಸಿದರು.

*
ಸಾರ್ವಜನಿಕರಿಗೆ ಕಡಿಮೆ ಪ್ರಮಾಣದಲ್ಲಿ ವಿತರಿಸಲಾಗುವುದು. ಉಳಿದ ಸಸಿಗಳನ್ನು ಅರಣ್ಯ ಭೂಮಿಯ ಖಾಲಿ ಪ್ರದೇಶದಲ್ಲಿ ಅರಣ್ಯೀಕರಣ ಮಾಡುವ ಉದ್ದೇಶ ಇದೆ.
-ಡಿ.ಭರತ್, ವಲಯ ಅರಣ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.