
ಹಗರಿಬೊಮ್ಮನಹಳ್ಳಿ: ‘ಐತಿಹಾಸಿಕ, ಸ್ವಾತಂತ್ರ್ಯ ಹೋರಾಟದ ಪರಂಪರೆ ಬಿಂಬಿಸುವ ನಾಟಕಗಳು ಹೆಚ್ಚು ಪ್ರದರ್ಶನ ಕಾಣಬೇಕು. ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಬೇಕು’ ಎಂದು ಸುರಪುರ ಬಲವಂತ ಬಹರಿ ಬಹದ್ಧೂರ್ ಸಂಸ್ಥಾನದ ರಾಜ ಕೃಷ್ಣಪ್ಪ ನಾಯಕ ಹೇಳಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಪ್ರೊ. ಸುಜಾತ ಅಕ್ಕಿ ರಚನೆಯ ‘ಜೋಗಿನಕಟ್ಟಿ ಜಂಗಮ–ಜೆ. ಯೋಗಾನಂದ ಜೀವನ ಚರಿತ್ರೆ’ ಕೃತಿಯನ್ನು ಈಚೆಗೆ ಬಿಡುಗಡೆಗೊಳಿಸಿ ಮಾತನಾಡಿದರು.
ಸಾಹಿತಿ ಅಕ್ಕಿ ಸುಜಾತ ಮಾತನಾಡಿ, ‘ಸುರಪುರದ ನಾಯಕರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ, ಶೂರತ್ವ ಮಾದರಿಯಾಗಿದೆ. ಮೌಲ್ಯಧಾರಿತ ಸಾಧನೆಗೆ ರಂಗಭೂಮಿ ವೇದಿಕೆಯಾಗಿದೆ. ನೈಜ ಐತಿಹಾಸಿಕ ವಿಷಯಗಳು ಮುಚ್ಚಿಹೋಗಿದ್ದು, ಅವುಗಳನ್ನು ರಂಗಭೂಮಿ ಮೂಲಕ ಹೊರತರುವ ಪ್ರಯತ್ನ ಮಾಡಬೇಕು’ ಎಂದರು.
ರಂಗಭೂಮಿ ಕಲಾವಿದ ಜೋಗಿನಕಟ್ಟಿ ಯೋಗಾನಂದ ಮಾತನಾಡಿದರು. ವಾಲ್ಮೀಕಿ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಪವಾಡಿ ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು.
ಜಿ. ವೆಂಕಣ್ಣ, ಜಿ. ಮಂಜುನಾಥ, ಸುರೇಶ್ ಚಿನ್ಮಲ್ಲಿ, ಕೆ.ಎಸ್. ಉಡುಚಪ್ಪ, ಹುರುಕಡ್ಲಿ ಶಿವಕುಮಾರ್, ಮೇಟಿ ಕೊಟ್ರಪ್ಪ, ಯಮನೂರಸ್ವಾಮಿ, ಐ.ಟಿ. ಕೊಟ್ರೇಶ್, ಡಿಶ್ ಮಂಜುನಾಥ, ಟಿ. ವೆಂಕೋಬಪ್ಪ, ಜಿ. ಮಂಜುನಾಥ, ಬಿ.ಕೆ. ವಿಶ್ವನಾಥ, ಶಾರದಾ ಮಂಜುನಾಥ ಇದ್ದರು.
ಕೃತಿ: ಜೋಗಿನಕಟ್ಟಿ ಜಂಗಮ
ಲೇಖಕರು: ಪ್ರೊ. ಸುಜಾತ ಅಕ್ಕಿ
ಪ್ರಕಾಶನ: ರಿಯಾ ಬುಕ್ ಹೌಸ್ ಮೈಸೂರು.
ಪುಟ: 124
ಬೆಲೆ: ₹150
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.