ADVERTISEMENT

ಹಗರಿಬೊಮ್ಮನಹಳ್ಳಿ | ತುರ್ತಾಗಿ ಕಾಶ್ಮೀರಕ್ಕೆ ಹಿಂತಿರುಗಿದ ಸೈನಿಕ

​ಪ್ರಜಾವಾಣಿ ವಾರ್ತೆ
Published 13 ಮೇ 2025, 14:23 IST
Last Updated 13 ಮೇ 2025, 14:23 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮರಬ್ಬಿಹಾಳು ಗ್ರಾಮದಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ಸೈನಿಕ ಡೊಳ್ಳಿನ ಸಂತೋಷ್
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮರಬ್ಬಿಹಾಳು ಗ್ರಾಮದಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ಸೈನಿಕ ಡೊಳ್ಳಿನ ಸಂತೋಷ್   

ಹಗರಿಬೊಮ್ಮನಹಳ್ಳಿ: ಭಾರತೀಯ ಸೈನ್ಯದ ಮಹಾರ್ ರೆಜಿಮೆಂಟ್‍ನಲ್ಲಿ ಕೆಲಸ ನಿರ್ವಹಿಸುತ್ತಿರುವ ತಾಲ್ಲೂಕಿನ ಮರಬ್ಬಿಹಾಳು ಗ್ರಾಮದ ಡೊಳ್ಳಿನ ಸಂತೋಷ್ ಸ್ವಗ್ರಾಮಕ್ಕೆ ಬಂದ ವೇಗದಲ್ಲಿಯೇ ಸೋಮವಾರ ಹಿಂತಿರುಗಿದರು.

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಸೇವೆ ಸಲ್ಲಿಸುತ್ತಿರುವ ಅವರು ತಮ್ಮ ಅವಳಿ ಮಕ್ಕಳ ನಾಮಕರಣ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅವಳಿ ಮಕ್ಕಳಿಗೆ ಶೌರ್ಯ ಮತ್ತು ಸಾಹಿತ್ಯ ಎಂದು ನಾಮಕರಣ ಮಾಡಿದ ಬಳಿಕ ತುರ್ತು ಕರೆ ಬಂದ ಕಾರಣ ತೆರಳಿದರು.

ಮಂಗಳವಾರ ಸಂತೋಷ್ ಅವರ 7ನೇ ವರ್ಷದ ವಿವಾಹ ಮಹೋತ್ಸವ ಕಾರ್ಯಕ್ರಮ ಇತ್ತು. ‘ದೇಶ ಸೇವೆಯ ಕರೆಗೆ ಪುತ್ರ ಹೋಗಿದ್ದು ಬೇಜಾರಾಗಿಲ್ಲ. ಮುಂದಿನ ವರ್ಷದಲ್ಲಿ ಬಂದು ಭಾಗವಹಿಸಲು ಅವಕಾಶ ಇದೆ’ ಎಂದು ಅವರ ತಂದೆ ದ್ಯಾಮಣ್ಣ ಹೆಮ್ಮೆಯಿಂದ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.