ADVERTISEMENT

ಹಂಪಿಯಲ್ಲಿ ನಡಿಗೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 14:03 IST
Last Updated 14 ಅಕ್ಟೋಬರ್ 2019, 14:03 IST
ಮಂತ್ರಾಲಯ ದಾಸ ಸಾಹಿತ್ಯ ಯೋಜನೆಯಿಂದ ಹಂಪಿಯಲ್ಲಿ ಹಮ್ಮಿಕೊಂಡಿದ್ದ ನಡಿಗೆಯಲ್ಲಿ ಪಾಲ್ಗೊಂಡಿರುವ ಭಕ್ತರು
ಮಂತ್ರಾಲಯ ದಾಸ ಸಾಹಿತ್ಯ ಯೋಜನೆಯಿಂದ ಹಂಪಿಯಲ್ಲಿ ಹಮ್ಮಿಕೊಂಡಿದ್ದ ನಡಿಗೆಯಲ್ಲಿ ಪಾಲ್ಗೊಂಡಿರುವ ಭಕ್ತರು   

ಹೊಸಪೇಟೆ: ಮಂತ್ರಾಲಯದ ದಾಸ ಸಾಹಿತ್ಯ ಯೋಜನೆಯಡಿ ಭಾನುವಾರ ಹಂಪಿಯಲ್ಲಿ ಸ್ಮಾರಕಗಳ ರಕ್ಷಣೆ ಕುರಿತು ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ವೆಂಕಟರಮಣ ದೇವಸ್ಥಾನದ ಆವರಣದಿಂದ ಆರಂಭವಾದ ದಾಸ ನಡಿಗೆ ಮೃತ್ಯುಂಜೇಶ್ವರ ದೇವಸ್ಥಾನ, ಉದ್ಭವ ಲಕ್ಷ್ಮಿ ಸನ್ನಿಧಿ ಮೂಲಕ ಹಾದು ಮೂಲ ಸ್ಥಳದಲ್ಲಿ ಕೊನೆಗೊಂಡಿತು.

ಯೋಜನೆಯ ಜಿಲ್ಲಾ ಸಂಚಾಲಕ ಅನಂತ ಪದ್ಮನಾಬ ರಾವ್‌ ಮಾತನಾಡಿ, ‘ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅವುಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಿ ಇಡುವುದು ನಮ್ಮೆಲ್ಲರ ಜವಾಬ್ದಾರಿ. ಅದರ ಮಹತ್ವ ಸಾರುವ ಉದ್ದೇಶದಿಂದ ಈ ನಡಿಗೆ ಹಮ್ಮಿಕೊಳ್ಳಲಾಗಿದೆ’ ಎಂದರು.

ADVERTISEMENT

ಯೋಜನೆಯ ಸದಸ್ಯರಾದ ಭಾರತಿ ಮಾರುತಿ, ಮಾರುತಿರಾವ್, ಲಕ್ಷ್ಮಿ, ಕಲಾವತಿ, ರೇವತಿ, ಜ್ಯೋತಿ, ರಘುರಾಜ್, ಅರ್ಚಕ ನರಸಿಂಹಾಚಾರ್ಯ, ಪ್ರಮೋದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.