ADVERTISEMENT

ಹರಪನಹಳ್ಳಿ: ಎತ್ತಿನ ಬಂಡಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 5:19 IST
Last Updated 3 ಅಕ್ಟೋಬರ್ 2025, 5:19 IST
ದಸರಾ ಅಂಗವಾಗಿ ಹರಪನಹಳ್ಳಿ ತಾಲ್ಲೂಕು ಅರಸೀಕೆರೆ ಗ್ರಾಮದಲ್ಲಿ ಬಂಡಿ ಕಟ್ಟಿ ಎತ್ತುಗಳನ್ನು ಓಡಿಸಲಾಯಿತು
ದಸರಾ ಅಂಗವಾಗಿ ಹರಪನಹಳ್ಳಿ ತಾಲ್ಲೂಕು ಅರಸೀಕೆರೆ ಗ್ರಾಮದಲ್ಲಿ ಬಂಡಿ ಕಟ್ಟಿ ಎತ್ತುಗಳನ್ನು ಓಡಿಸಲಾಯಿತು   

ಹರಪನಹಳ್ಳಿ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಅರಸೀಕೆರೆ ಗ್ರಾಮದಲ್ಲಿ ಅಜ್ಜಯ್ಯ, ವೀರಣ್ಣ, ಕಾಳಮ್ಮ ದೇವರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಊರ ಹೊರಗಿನ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಾಯಿತು. ಪ್ರಮುಖ ಬೀದಿಯಲ್ಲಿ ಎತ್ತುಗಳಿಗೆ ಬಂಡಿ ಕಟ್ಟಿ ಓಡಿಸಲಾಯಿತು.

ಕೋಲಶಾಂತೇಶ್ವರ ಮಠದ ಶಾಂತಲಿಂಗ ರಾಜದೇಶಿ ಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬನ್ನಿ ವಿತರಣೆಗೆ ಚಾಲನೆ ನೀಡಲಾಯಿತು. ಮಾಜಿ ಸಂಸದ ವೈ.ದೇವೇಂದ್ರಪ್ಪ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ, ಪ್ರಶಾಂತ ಪಾಟೀಲ್, ಎ.ಎಚ್.ಪಂಪಣ್ಣ, ಕೆ.ಅಂಜಿನಪ್ಪ, ನಾಗಣ್ಣ ಇದ್ದರು.

ADVERTISEMENT

ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರು ರಾತ್ರಿ ಹುಲಿಕಟ್ಟೆ ಗುಳೇದ ಲಕ್ಕಮ್ಮ ದೇವಿಗೆ ಭೇಟಿ ನೀಡಿ ದರ್ಶನ ಪಡೆದರು.

ಇತಿಹಾಸ ಪ್ರಸಿದ್ದ ದೇವರ ತಿಮ್ಲಾಪುರದಲ್ಲಿ ಲಕ್ಷ್ಮಿವೆಂಕಟೇಶ್ವರ ಸ್ವಾಮಿಗೆ ಪುಷ್ಪಾಲಂಕಾರ ಆಕರ್ಷಿಸಿತು. ಹರಪನಹಳ್ಳಿ ಕೋಟೆ ಕಾಳಮ್ಮ ದೇವಿ, ಉಪ್ಪಾರಗೇರಿ ಮತ್ತಿಹಳ್ಳಿ ದುಗ್ಗಮ್ಮ, ಹುಲಿಕಟ್ಟೆಯಲ್ಲಿ ಗುಳೇದ ಲಕ್ಕಮ್ಮ ದೇವಿ, ಮೈದೂರಿನಲ್ಲಿ ಊರಮ್ಮ ದೇವಿ, ಕಣಿವಿಹಳ್ಳಿ ಗ್ರಾಮದಲ್ಲಿ ಹೊನ್ನತಾಂಬೆ ದೇವಿ, ಮತ್ತಿಹಳ್ಳಿ ದುರುಗಮ್ಮ, ದುಗ್ಗಾವತಿ ದುಗ್ಗಮ್ಮ, ಹಲವಾಗಲು, ಬೆಣ್ಣಿಹಳ್ಳಿ, ತೆಲಿಗಿ, ನಂದಿಬೇವೂರು, ಚಿಗಟೇರಿ, ಕಡಬಗೆರೆ, ಹಾರಕನಾಳು, ಕಾನಹಳ್ಳಿ, ಮಾಡಲಗೇರೆ, ಕೂಲಹಳ್ಳಿ, ಬಾಗಳಿಮ ಕೂಲಹಳ್ಳಿ, ಗ್ರಾಮಗಳಲ್ಲಿ ಗ್ರಾಮ ದೇವರುಗಳಿಗೆ ಅಲಂಕಾರ ಮಾಡಲಾಗಿತ್ತು.

ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಉಚ್ಚಂಗೆಮ್ಮ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು
ಹರಪನಹಳ್ಳಿ ತಾಲ್ಲೂಕು ಹುಲಿಕಟ್ಟೆ ಗ್ರಾಮದಲ್ಲಿ ಗುಳೇದ ಲಕ್ಕಮ್ಮ ದೇವಿಗೆ ಅಲಂಕಾರ ಮಾಡಿರುವುದು
ಹರಪನಹಳ್ಳಿ ತಾಲ್ಲೂಕು ದೇವರ ತಿಮ್ಮಲಾಪುರ ಗ್ರಾಮದಲ್ಲಿ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಗೆ ಪುಷ್ಪಾಲಂಕಾರ ಮಾಡಿರುವುದು.
ಹರಪನಹಳ್ಳಿ ತಾಲ್ಲೂಕು ಮೈದೂರು ಗ್ರಾಮದಲ್ಲಿ ಊರಮ್ಮ ದೇವಿ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.