
ಪ್ರಜಾವಾಣಿ ವಾರ್ತೆ
ಹರಪನಹಳ್ಳಿ: ಕೃಷಿ ಕೆಲಸದಲ್ಲಿ ತೊಡಗಿದ್ದಾಗ ಎತ್ತು ಇರಿದು ಗಾಯಗೊಂಡ ರೈತರೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಗುರುವಾರ ಜರುಗಿದೆ.
ತಾಲ್ಲೂಕಿನ ಆಲದಹಳ್ಳಿ ಗ್ರಾಮದ ಬಿ.ಪಂಚಪ್ಪ (65) ಮೃತಪಟ್ಟ ವ್ಯಕ್ತಿ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಎತ್ತು ಕೊಂಬಿನಿಂದ ಪಕ್ಕೆಗೆ ಇರಿದು ಗಾಯಗೊಳಿಸಿತ್ತು.
ಮತ್ತಿಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಗರ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ದಾಖಲಿಸಿದಾಗ ಮೃತಪಟ್ಟಿದ್ದಾರೆ ಎಂದು ಮೃತ ರೈತನ ಪುತ್ರ ಬಿ.ಕೊಟ್ರೇಶ್ ಅವರು ಪೊಲೀಸರಿಗೆ ಲಿಖಿತ ಹೇಳಿಕೆ ಸಲ್ಲಿಸಿದ್ದಾರೆ. ಚಿಗಟೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.