ಹೂವಿನಹಡಗಲಿ: ತಾಲ್ಲೂಕಿನ ಮಾನ್ಯರಮಸಲವಾಡ ಗ್ರಾಮದಲ್ಲಿ ಒಂಬತ್ತು ವರ್ಷಗಳ ಬಳಿಕ ಹೊನ್ನತ್ತೆಮ್ಮ ದೇವಿ ಜಾತ್ರೆ ಶುಕ್ರವಾರ ಜರುಗಿತು.
ಮಹಿಳೆಯರು ಉಡಿ ತುಂಬಿ, ಮುಸುಕಿನ ಕಳಸ ಬೆಳಗಿದರು. ಇದರೊಂದಿಗೆ ಜಾತ್ರೆ ಸಂಪನ್ನಗೊಂಡಿತು.
ಸೋಮವಾರದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಮಂಗಳವಾರ ರಾತ್ರಿ ಗ್ರಾಮದ ಮುಖ್ಯ ಬೀದಿಗಳಲ್ಲಿ ದೇವಿಯ ಉತ್ಸವ ಮೂರ್ತಿ ಮೆರವಣಿಗೆ ಜರುಗಿತು. ಬೆಳಿಗ್ಗೆ ದೇವಿ ಚೌತಮನೆ ಕಟ್ಟೆಯಲ್ಲಿ ಮೂರ್ತಿ ಪ್ರತಿಷ್ಠಾಪಿಸಿ, ಧಾರ್ಮಿಕ ವಿಧಿ ವಿಧಾನ, ವಿಶೇಷ ಪೂಜೆ ನೆರವೇರಿಸಲಾಯಿತು.
ಮಳೆ, ಬೆಳೆ ಸಮೃದ್ಧಿಯಾಗಿ ಆಗಲೆಂದು ಪ್ರಾರ್ಥಿಸಿ ಗ್ರಾಮದ ಸುತ್ತಲೂ ಹುಲುಸು ಚೆಲ್ಲಲಾಯಿತು. ಭಕ್ತರು ಹಣ್ಣು–ಕಾಯಿ ಅರ್ಪಿಸಿ ದೇವಿ ದರ್ಶನ ಪಡೆದರು. ದೀಡ್ ನಮಸ್ಕಾರ ಸೇರಿದಂತೆ ವಿವಿಧ ಹರಕೆ ತೀರಿಸಿದರು. ಪ್ರಕಾಶ ಜೈನ್ ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.