ADVERTISEMENT

ಮಾಜಿ ಡಿಸಿಎಂ ಎಂ.ಪಿ.ಪ್ರಕಾಶ್ ಪುತ್ರಿ ಬಿಜೆಪಿ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2023, 13:38 IST
Last Updated 24 ಏಪ್ರಿಲ್ 2023, 13:38 IST
ಬೆಂಗಳೂರಿನಲ್ಲಿ ಎಂ.ಪಿ.ಸುಮಾ ವಿಜಯ್ ಅವರು ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಗೊಂಡರು
ಬೆಂಗಳೂರಿನಲ್ಲಿ ಎಂ.ಪಿ.ಸುಮಾ ವಿಜಯ್ ಅವರು ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಗೊಂಡರು   

ಹೂವಿನಹಡಗಲಿ: ಮಾಜಿ ಉಪಮುಖ್ಯಮಂತ್ರಿ, ದಿವಂಗತ ಎಂ.ಪಿ.ಪ್ರಕಾಶ ಅವರ ಪುತ್ರಿ ಸುಮಾ ವಿಜಯ್ ಅವರು ಬೆಂಬಲಿಗರೊಂದಿಗೆ ಸೋಮವಾರ ಬೆಂಗಳೂರಿನಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನಕುಮಾರ್ ಕಟೀಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಂಡಲ ಅಧ್ಯಕ್ಷ ಎಸ್.ಸಂಜೀವರೆಡ್ಡಿ, ಎಂ.ಬಿ.ಬಸವರಾಜ, ಈಟಿ ಲಿಂಗರಾಜ, ಕರೆಂಗಿ ಸುಭಾಶ್ಚಂದ್ರ ಸಮ್ಮುಖದಲ್ಲಿ, ವಿಜಯಕುಮಾರ್ ಹಿರೇಮಠ, ಸಾತ್ವಿಕ ಹಿರೇಮಠ, ಪುರಸಭೆ ಮಾಜಿ ಅಧ್ಯಕ್ಷರಾದ ಕೋಡಿಹಳ್ಳಿ ಕೊಟ್ರೇಶ, ಹಣ್ಣಿ ವೀರಮ್ಮ, ಆರ್.ಪವಿತ್ರ, ಯಮುನಪ್ಪ, ಮಾಜಿ ಸದಸ್ಯ ಆರ್.ಚೈತನ್ಯ, ಮುಖಂಡರಾದ ಸುದರ್ಶನ ಶಿಲ್ಪಿ, ಹನುಮಂತು, ಬಿ.ಎಂ.ಅಭಿಷೇಕ, ಸುರೇಶ ಕಾಯಣ್ಣನವರ, ಕಿರಣಕುಮಾರ್ ಲಿಂಗದಹಳ್ಳಿ, ಎಂ.ಪಿ.ಅರುಣ, ಗೀತಾ ದೇಸಾಯಿ ಅವರು ಬಿಜೆಪಿ ಸೇರ್ಪಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT