ADVERTISEMENT

ಹರಿಹರ ಪೀಠ ಬ್ರೋಕರ್‌ ಪರವಾಗಿದೆ: ಎಚ್‌.ಎಸ್‌.ಶಿವಶಂಕರ್ ಆರೋಪ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 14:24 IST
Last Updated 23 ಜನವರಿ 2021, 14:24 IST
 ಎಚ್‌.ಎಸ್‌.ಶಿವಶಂಕರ್
ಎಚ್‌.ಎಸ್‌.ಶಿವಶಂಕರ್   

ಹಗರಿಬೊಮ್ಮನಹಳ್ಳಿ: ‘ಹರಿಹರದ ಪಂಚಮಸಾಲಿ ಪೀಠವೂ ಬ್ರೋಕರ್‌, ವ್ಯಾಪಾರಿಗಳ ಪರವಾಗಿದೆ. ಈ ಪೀಠ ಸಮಾಜಕ್ಕೆ ಯಾವುದೇ ಕೊಡುಗೆ ನೀಡಿಲ್ಲ’ ಎಂದು ಮಾಜಿ ಶಾಸಕ ಎಚ್‌.ಎಸ್‌.ಶಿವಶಂಕರ್ ಆರೋಪಿಸಿದರು.

ಪಟ್ಟಣದಲ್ಲಿ ಶನಿವಾರ ಏರ್ಪಡಿಸಿದ್ದ ಪಂಚಮಸಾಲಿ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ‘2ಎ ಮೀಸಲಾತಿಗೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಪಾದಯಾತ್ರೆ ಕೈಗೊಂಡಾಗ ಹರಿಹರ ಪೀಠದ ಸ್ವಾಮೀಜಿ ಕುಹಕದ ಮಾತುಗಳನ್ನು ಆಡಿದ್ದಾರೆ. ಮಠ, ಮಾನ್ಯಗಳು ಎಂ.ಪಿ., ಎಂ.ಎಲ್‌.ಎ. ಮಾಡುವುದಕ್ಕೆ ಸ್ಥಾಪನೆಯಾಗಿಲ್ಲ. ಪೀಠದ ಇರುವುದು ಭಕ್ತರಿಗಾಗಿ. ಹರಿಹರ ಪೀಠಕ್ಕೆ ಬಂದಿದ್ದ ನಟಿ ರಾಗಿಣಿ ಜೈಲು ಪಾಲಾದರು. ಈ ಪೀಠಕ್ಕೆ ಯೋಗ ಸ್ವಾಮೀಜಿಯ ಅಗತ್ಯವಿಲ್ಲ’ ಎಂದು ಹೇಳಿದರು.

ಸಂಸದ ವೈ.ದೇವೇಂದ್ರಪ್ಪ ಮಾತನಾಡಿ, ‘ಪಂಚಮಸಾಲಿ ಸಮಾಜವನ್ನು 2ಎ ಮೀಸಲಾತಿಗೆ ಸೇರಿಸುವಂತೆ ಆಗ್ರಹಿಸಲು ಸಂಸದರ ನಿಯೋಗ ಮುಖ್ಯಮಂತ್ರಿಗಳ ಬಳಿ ತೆರಳಲಿದೆ’ ಎಂದರು.

ADVERTISEMENT

ಪಂಚಮಸಾಲಿ ಸಮಾಜದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಮಾತನಾಡಿ, ‘ಬೇಡಿಕೆ ಈಡೇರಿಕೆಗಾಗಿ ಸಮಾಜದ ಎರಡು ಲಕ್ಷ ಮಹಿಳೆಯರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.