ADVERTISEMENT

ಅಪೂರ್ಣ ಕಾಮಗಾರಿ: ಸಂಚಾರ ದುಸ್ತರ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 11:21 IST
Last Updated 22 ಜುಲೈ 2021, 11:21 IST
ಹೊಸಪೇಟೆಯ 7ನೇ ವಾರ್ಡ್‌ನಲ್ಲಿ ರಸ್ತೆಯುದ್ದಕ್ಕೂ ಹೊಂಡ ನಿರ್ಮಾಣವಾಗಿದ್ದು, ಮಳೆ ನೀರು ಸಂಗ್ರಹಗೊಂಡಿದೆ
ಹೊಸಪೇಟೆಯ 7ನೇ ವಾರ್ಡ್‌ನಲ್ಲಿ ರಸ್ತೆಯುದ್ದಕ್ಕೂ ಹೊಂಡ ನಿರ್ಮಾಣವಾಗಿದ್ದು, ಮಳೆ ನೀರು ಸಂಗ್ರಹಗೊಂಡಿದೆ   

ಹೊಸಪೇಟೆ(ವಿಜಯನಗರ): ನಗರದ 7ನೇ ವಾರ್ಡ್ ಪಾಂಡುರಂಗ ದೇವಸ್ಥಾನದಿಂದ ಲಂಬಾಣಿ ತಾಂಡಾಕ್ಕೆ ತೆರಳುವ ರಸ್ತೆ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಸಂಚಾರ ದುಸ್ತರಗೊಂಡಿದೆ.

7ನೇ ವಾರ್ಡ್ ಮೂಲಕ ಸೇವಾಲಾಲ್ ತಾಂಡಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಪಾಂಡುರಂಗ ದೇವಸ್ಥಾನ ರಸ್ತೆ ಕಾಮಗಾರಿಗಳು ಲೋಕೋಪಯೋಗಿ ಇಲಾಖೆ ವತಿಯಿಂದ ವಿಶೇಷ ಘಟಕ ಯೋಜನೆ(ಎಸ್‌ಸಿಪಿ) ಮತ್ತು ಗಿರಿಜನ ಉಪಯೋಜನೆ(ಟಿಎಸ್‌ಪಿ) ಅಡಿಯಲ್ಲಿ ಮಂಜೂರಾಗಿತ್ತು.

ದೇವಸ್ಥಾನ ಬಳಿಯ ರಸ್ತೆ ಮತ್ತು ಒಂದು ಬದಿಯ ಚರಂಡಿ ನಿರ್ಮಾಣ ಕಾಮಗಾರಿಯನ್ನು ಮಾರ್ಚ್ ತಿಂಗಳಲ್ಲಿ ಗುತ್ತಿಗೆದಾರರು ಪೂರ್ಣಗೊಳಿಸಿದ್ದಾರೆ. ಆದರೆ, ಲಂಬಾಣಿ ತಾಂಡಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮಣ್ಣನ್ನು ಅಗೆದು ಅದನ್ನು ಅಷ್ಟಕ್ಕೆ ಬಿಟ್ಟಿದ್ದಾರೆ. ಇದರಿಂದಾಗಿ ಬಹಳ ಸಮಸ್ಯೆ ಆಗುತ್ತಿದೆ ಎಂದು ಸ್ಥಳೀಯರು ಗೋಳು ತೋಡಿಕೊಂಡಿದ್ದಾರೆ.

ADVERTISEMENT

ಅಪೂರ್ಣಗೊಂಡ ಕಾಮಗಾರಿಯಿಂದ ವಾಹನ ಸವಾರರು, ಪಾದಚಾರಿಗಳಿಗೆ ಬಹಳ ಸಮಸ್ಯೆ ಎದುರಾಗುತ್ತಿದೆ. ಸ್ವಲ್ಪ ಮಳೆ ಬಂದರೆ ರಸ್ತೆಯೆಲ್ಲ ಕೊಚ್ಚೆಯಾಗುತ್ತದೆ. ಸಂಬಂಧಿಸಿದ ಅಧಿಕಾರಿಗಳು ಶೀಘ್ರ ಕಾಮಗಾರಿ ಮುಗಿಸಿ, ಸ್ಥಳೀಯರ ಬವಣೆ ದೂರ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.