ಸಂಡೂರು: ತಾಲ್ಲೂಕಿನ ಕುರೆಕುಪ್ಪ ಪುರಸಭೆಯ ವ್ಯಾಪ್ತಿಯಲ್ಲಿನ ತೋರಣಗಲ್ಲು ಗ್ರಾಮದ ರೈಲ್ವೆ ನಿಲ್ದಾಣ ಪ್ರದೇಶದಲ್ಲಿರುವ ನೂತನ ಇಂದಿರಾ ಕ್ಯಾಂಟೀನ್ ಕಾಮಗಾರಿ ಮುಗಿದು ಎರಡು ತಿಂಗಳಾದರೂ ಉದ್ಘಾಟನೆಯಾಗದೇ ಸಾರ್ವಜನಿಕರ ಉಪಯೋಗಕ್ಕೆ ಬಾರದೇ ವ್ಯರ್ಥವಾಗಿದೆ.
ಜಿಂದಾಲ್ ಕಾರ್ಖಾನೆ, ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಘಟಕ ಸೇರಿದಂತೆ ಇತರೆ ಸಣ್ಣ, ಬೃಹತ್ ಪ್ರಮಾಣದ ಹಲವಾರು ಕೈಗಾರಿಕೆಗಳಿದ್ದು, ರಾಜ್ಯ, ಹೊರ ರಾಜ್ಯದ ಸಾವಿರಾರು ಬಡ ಕಾರ್ಮಿಕರು ಈ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ. ನೂತನ ಇಂದಿರ ಕ್ಯಾಂಟಿನ್ ಆರಂಭದಿಂದ ಈ ಜನರಿಗೆ ವರದಾನವಾಗಲಿದೆ.
ವಿವಿಧ ಕಾರ್ಖಾನೆಗಳ ಬಡ ಕಾರ್ಮಿಕರು, ಬಡ ಜನರು ನಿತ್ಯದ ಊಟ, ಉಪಹಾರಕ್ಕಾಗಿ ಹೆಚ್ಚಿನ ಹಣ ವ್ಯಹಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದು, ನೂತನ ಇಂದಿರಾ ಕ್ಯಾಂಟಿನ್ ಆರಂಭವಾದರೇ ಬಡಜನ, ಕಾರ್ಮಿಕರಿಗೆ ಆರ್ಥಿಕವಾಗಿ ಬಹಳ ಅನುಕೂಲವಾಗುತ್ತದೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಪೌರಾಡಳಿತ ನಿರ್ದೇಶನಾಲಯದ ಅನುದಾನದಲ್ಲಿ ಸುಸಜ್ಜಿತ ಇಂದಿರಾ ಕ್ಯಾಂಟಿನ್ ನಿರ್ಮಾಣವಾಗಿದ್ದು, ಕ್ಯಾಂಟಿನ್‍ಗೆ ವಿದ್ಯುತ್, ಅನಿಲಸಂಪರ್ಕ, ಕುಡಿಯುವ ನೀರು, ಸಿಸಿ ಕ್ಯಾಮೇರಾ ಸೇರಿದಂತೆ ಇತರೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿ, ಸುಣ್ಣಬಣ್ಣ ಬಳಿದು ಆರಂಭಕ್ಕೆ ಸಿದ್ಧಪಡಿಸಲಾಗಿದೆ.
ಕುರೆಕುಪ್ಪ ಪುರಸಭೆಯ ಅಧಿಕಾರಿಗಳ, ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ಇಂದಿರಾ ಕ್ಯಾಂಟಿನ್ ಉದ್ಘಾಟನೆಯು ವಿಳಂಭವಾಗಿದ್ದರಿಂದ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡಿದ್ದು, ಬಡಜನರ, ಕಾರ್ಮಿಕರ ಅನುಕೂಲಕ್ಕಾಗಿ ಕ್ಯಾಂಟಿನ್‍ನನ್ನು ತ್ವರಿತವಾಗಿ ಆರಂಭಿಸುವಂತೆ ಜನರ ಒತ್ತಾಯವಾಗಿದೆ.
ತೋರಣಗಲ್ಲು ಗ್ರಾಮಲ್ಲಿ ಜಿಂದಾಲ್ ಕಾರ್ಖಾನೆ ಸೇರಿದಂತೆ ಇತರೆ ಸಣ್ಣ ಬೃಹತ್ ಪ್ರಮಾಣದ ಹತ್ತಾರು ಕೈಗಾರಿಕೆಗಳಿದ್ದು ಸಾವಿರಾರು ಕಾರ್ಮಿಕರು ವಾಸ ಮಾಡುತ್ತಿದ್ದಾರೆ. ಬಡಕಾರ್ಮಿಕರ ಆರ್ಥಿಕ ಹಿತದೃಷ್ಠಿಯಿಂದ ಪುರಸಭೆಯವರು ಶೀಘ್ರವಾಗಿ ಇಂದಿರಾ ಕ್ಯಾಂಟೀನ್ ಆರಂಭಿಸಬೇಕುನಾಗಭೂಷಣ್ ತೋರಣಗಲ್ಲು ಗ್ರಾಮದ ನಿವಾಸಿ
ನೂತನ ಇಂದಿರಾ ಕ್ಯಾಂಟೀನ್ ಕಾಮಗಾರಿ ಸಂಪೂರ್ಣವಾಗಿ ಮುಗಿದಿದ್ದು ಈಗಾಗಲೇ ಮೂಲ ಸೌಲಭ್ಯ ಕಲ್ಪಿಸಲಾಗಿದೆ. ಕಾರ್ಮಿಕರ ಅನುಕೂಲಕ್ಕಾಗಿ ಇಂದಿರಾ ಕ್ಯಾಂಟೀನ್ ಅನ್ನು ತ್ವರಿತವಾಗಿ ಆರಂಭಿಸಲಾಗುವುದುಸತೀಶ್ಗುಡ್ಡೆ ಮುಖ್ಯಾಧಿಕಾರಿ ಕುರೆಕುಪ್ಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.