ADVERTISEMENT

ಕಂಪ್ಲಿ: ಪೇಟೆ ಬಸವೇಶ್ವರ, ನೀಲಮ್ಮ ರಥೋತ್ಸವ ವೈಭವ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 4:17 IST
Last Updated 1 ಡಿಸೆಂಬರ್ 2025, 4:17 IST
ಕಂಪ್ಲಿ ಶ್ರೀಪೇಟೆ ಬಸವೇಶ್ವರ ನೀಲಮ್ಮನವರ ಜೋಡಿ ಮಹಾರಥೋತ್ಸವ ಭಾನುವಾರ ಭಕ್ತರ ಜಯಘೋಷದೊಂದಿಗೆ ವಿಜೃಂಭಣೆಯಿಂದ ಜರುಗಿತು
ಕಂಪ್ಲಿ ಶ್ರೀಪೇಟೆ ಬಸವೇಶ್ವರ ನೀಲಮ್ಮನವರ ಜೋಡಿ ಮಹಾರಥೋತ್ಸವ ಭಾನುವಾರ ಭಕ್ತರ ಜಯಘೋಷದೊಂದಿಗೆ ವಿಜೃಂಭಣೆಯಿಂದ ಜರುಗಿತು   

ಕಂಪ್ಲಿ: ಪಟ್ಟಣದ ಆರಾಧ್ಯದೈವ ಶ್ರೀಪೇಟೆ ಬಸವೇಶ್ವರ ನೀಲಮ್ಮನವರ ಜೋಡಿ ಮಹಾ ರಥೋತ್ಸವ ಭಾನುವಾರ ಭಕ್ತರ ಜಯಘೋಷದೊಂದಿಗೆ ವಿಜೃಂಭಣೆಯಿಂದ ಜರುಗಿತು.

ಪ್ರತಿ ವರ್ಷ ನೀಲಮ್ಮ ರಥ ಕೂಲಿಕಟ್ಟೆ ಬಸವೇಶ್ವರ ದೇವಸ್ಥಾನದವರೆಗೆ ತೆರಳಿದರೆ, ಬಸವೇಶ್ವರ ರಥ ನಡುಲ ಮಸೀದಿ ಬಳಿಯೇ ನಿಲ್ಲುತ್ತಿತ್ತು. ಈ ವರ್ಷ ರಸ್ತೆ ವಿಸ್ತರಿಸಿರುವುದರಿಂದ ಎರಡು ರಥಗಳು ಕೂಲಿ ಕಟ್ಟೆ ಬಸವೇಶ್ವರ ದೇವಸ್ಥಾನದವರೆಗೆ ತೆರಳಿ ನಂತರ ತೇರಿನಮನೆಗೆ ಮರಳಿದವು.

ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆಯಿಂದ ಪಾಲ್ಗೊಂಡಿದ್ದ ಭಕ್ತರು ಎರಡು ತೇರುಗಳಿಗೆ ಉತ್ತತ್ತಿ ತೂರಿ ಭಕ್ತಿ ಸಮರ್ಪಿಸಿದರು. ರಥೋತ್ಸವದಲ್ಲಿ ಭಾಗವಹಿಸಿದ್ದ ಹೂವಿನ ಅಡ್ಡಪಲ್ಲಕ್ಕಿ, ನಂದಿಕೋಲು, ತಾಷಾರಾಂಡೋಲ್, ಚಿಲಿಪಿಲಿ ಗೊಂಬೆ ಕುಣಿತ, ಜನಪದ ಕಲಾವಿದರು ಮೆರುಗು ನೀಡಿದರು.

ADVERTISEMENT

ಶನಿವಾರ ರಾತ್ರಿ ಹೂ, ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದ ಹೂವಿನ ಅಡ್ಡಪಲ್ಲಕ್ಕಿ ಉತ್ಸವ, ರಾವಣ ರಥ ವೈಭವದಿಂದ ನಡೆಯಿತು.

ಶಾಸಕ ಜೆ.ಎನ್.ಗಣೇಶ್, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಡಿ.ವೀರಪ್ಪ, ಧರ್ಮಕರ್ತ ಯು.ಎಂ.ವಿದ್ಯಾಶಂಕರ, ಪದಾಧಿಕಾರಿಗಳಾದ ಜೌಕೀನ್ ಸತೀಶ್, ಮಣ್ಣೂರು ಶರಣಪ್ಪ, ವಸ್ತ್ರದ ಜಡೆಯ್ಯಸ್ವಾಮಿ, ಚಿನ್ನದಕಂತಿ ಶಿವಮೂರ್ತಿಸ್ವಾಮಿ, ಬಂಡೆಯ್ಯಸ್ವಾಮಿ, ಎಸ್. ಮಂಜುನಾಥ, ಅರವಿ ಅಮರೇಶ, ಮಣ್ಣೂರು ನವೀನ್, ನಂದಿಕೋಲು ಶಿವಪ್ರಸಾದ್, ಬಿ. ಶಿವಾನಂದ, ಕೆ.ಎಂ. ಹೇಮಯ್ಯಸ್ವಾಮಿ, ವಾಲಿ ಕೊಟ್ರಪ್ಪ, ಕಲ್ಗುಡಿ ವಿಶ್ವನಾಥ, ಆದಿಮನಿ ಹೊನ್ನಪ್ಪ, ಭಕ್ತರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.