ADVERTISEMENT

250 ಜನರ ಆರೋಗ್ಯ ತಪಾಸಣೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 16:16 IST
Last Updated 29 ಜೂನ್ 2025, 16:16 IST
ಕಂಪ್ಲಿಯಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ ಭಾನುವಾರ ಜರುಗಿತು
ಕಂಪ್ಲಿಯಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ ಭಾನುವಾರ ಜರುಗಿತು   

ಪ್ರಜಾವಾಣಿ ವಾರ್ತೆ

ಕಂಪ್ಲಿ: ಬಳ್ಳಾರಿಯ ಐ.ಎಂ.ಎ ಮತ್ತು ಡಬ್ಲ್ಯು.ಡಿ.ಡಬ್ಲ್ಯು (ವುಮೆನ್ ಡಾಕ್ಟರ್ಸ್ ವಿಂಗ್) ಮತ್ತು ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಟ.ವಿ. ಸುದರ್ಶನರೆಡ್ಡಿ ನೇತೃತ್ವದಲ್ಲಿ ಇಲ್ಲಿಯ 8ನೇ ವಾರ್ಡ್ ಸಿಂಧೋಳ್ಳು ಕಾಲೊನಿಯ ವೀರನಾಗಮ್ಮದೇವಿ ಸಮುದಾಯ ಭವನದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ ಭಾನುವಾರ ಜರುಗಿತು.

ಸ್ತ್ರೀರೋಗ, ಹೃದ್ರೋಗ, ದಂತ, ಕಣ್ಣು, ಕಿವಿ, ಮೂಗು ಸೇರಿದಂತೆ ಇತರೆ ರೋಗಗಳ ತಪಾಸಣೆ ನಡೆಸಿ, ಉಚಿತವಾಗಿ ಔಷಧ ವಿತರಿಸಲಾಯಿತು. 250ಕ್ಕೂ ಹೆಚ್ಚು ಮಂದಿ ತಪಾಸಣೆಗೆ ಒಳಗಾದರು.

ADVERTISEMENT

ಐ.ಎಂ.ಎ ಕಾರ್ಯದರ್ಶಿ ಡಾ. ಅರುಣಾ ಕಾಮಿನೇನಿ, ಡಾ. ಸಂಗೀತಾ ಕಟ್ಟಿಮನಿ, ಡಬ್ಲ್ಯು.ಡಿ.ಡಬ್ಲ್ಯು ಅಧ್ಯಕ್ಷೆ ಡಾ. ಪ್ರಣೀತಾ ಅಜಯ್, ವೈದ್ಯರಾದ ಜಯಶ್ರೀ, ಶ್ರೀಲಕ್ಷ್ಮಿ, ರೇಣುಕಾ ಮಂಜುನಾಥ, ಸಾಹಿತಿ ಪರ್ಮಿ, ಜಯಸೂರ್ಯ, ಶರಣಪ್ಪ ಅವರು ತಪಾಸಣೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.